ಬೆಂಗ್ಳೂರಲ್ಲಿ ಖತರ್ನಾಕ್ ಕಿಡ್ನಾಪ್ ಗ್ಯಾಂಗ್-ಅಪಹರಣಕ್ಕೊಳಾಗದ ಯುವಕನಿಂದಲೇ ವಾಟ್ಸಪ್ ವಿಡಿಯೋ

ಬೆಂಗಳೂರು: ನಗರದಲ್ಲೊಂದು ಖತರ್ನಾಕ್ ಕಿಡ್ನಾಪ್ ಗ್ಯಾಂಗ್ ಪತ್ತೆಯಾಗಿದೆ. ಕಿಡ್ನಾಪ್ ಗ್ಯಾಂಗ್ ಅಪಹರಣ ಮಾಡಿದ ಯುವಕನಿಂದಲೇ ವಾಟ್ಸಪ್ ವಿಡಿಯೋ ಆತನ ಪೋಷಕರಿಗೆ ಕಳುಹಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದೆ.

19 ವರ್ಷದ ಶರತ್ ಅಪಹರಣಕ್ಕೊಳಾಗದ ಯುವಕ. ಶರತ್ ತಂದೆ ಆದಾಯ ತೆರಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಶರತ್ ನಿನ್ನೆ ತನ್ನ ಬುಲೆಟ್ ಬೈಕ್ ಖರೀದಿ ಮಾಡಿ ರೌಂಡ್ಸ್ ಹೋಗಿದ್ದನು. ಈ ವೇಳೆ ಶರತ್ ಅಪಹರಣಕ್ಕೊಳಗಾಗಿದ್ದು, ರಾತ್ರಿ 11 ಗಂಟೆಗೆ ಆತನಿಂದಲೇ ವಾಟ್ಸಪ್ ವಿಡಿಯೋ ಮಾಡಿ ಪೋಷಕರಿಗೆ ಕಳುಹಿಸಿ ಹಣದ ಬೇಡಿಕೆ ಇಟ್ಟಿದ್ದಾರೆ

ವಾಟ್ಸಪ್ ವಿಡಿಯೋದಲ್ಲೇನಿದೆ?:
ಹಲೋ ಅಪ್ಪ,
ನಿನ್ನಿಂದ ಅನುಭವಿಸಿದವರು ನನ್ನನ್ನು ಕಿಡ್ನಾಪ್ ಮಾಡಿದ್ದಾರೆ. ನನಗೆ ತುಂಬಾ ಟಾರ್ಚರ್ ಕೊಡುತ್ತಿದ್ದಾರೆ. 50 ಲಕ್ಷ ರೂ. ಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಹಣವನ್ನು ತಂದುಕೊಡಿ ನಾನಿವರ ಜೊತೆಗೆ ಇರುತ್ತೇನೆ. ಪೊಲೀಸ್ ಕಂಪ್ಲೇಂಟ್ ಮಾಡಬೇಡಿ, ಇವರ ಹತ್ತಿರ ತುಂಬಾ ವೆಪನ್ ಗಳಿದ್ದು, ತುಂಬಾ ಟೆರರ್ ಆಗಿದ್ದಾರೆ. ಪೊಲೀಸ್ ಕಂಪ್ಲೇಂಟ್ ಮಾಡಿದರೆ ನಮ್ಮ ಫ್ಯಾಮಿಲಿಗೂ ಮತ್ತು ನನಗೂ ತೊಂದರೆಯಾಗುತ್ತದೆ. ಇವರು ನಮ್ಮ ಅಕ್ಕಳನ್ನು ಸಹ ಫಾಲೋ ಮಾಡುತ್ತಿದ್ದಾರೆ. ಆಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹೇಳಿದ್ದಾರೆ. ಅವರು ಹೇಳಿದ ಮಾಹಿತಿಗಳೆಲ್ಲಾ ಕರೆಕ್ಟ್ ಆಗಿದೆ. ಪ್ಲೀಸ್ ಫ್ಯಾಮಿಲಿ ಜೊತೆ ನನ್ನನ್ನು ಉಳಿಸಿಕೊಳ್ಳಿ. ಇವತ್ತು ನಾನು ಸಿಕ್ಕಿದ್ದೇನೆ, ನಾಳೆ ನಮ್ಮ ಅಕ್ಕ ಸಿಕ್ಕಿ ಹಾಕಿಕೊಳ್ಳಬಹುದು ಹಾಗಾಗಿ ನನ್ನಿಂದಲೇ ಈ ತೊಂದರೆ ಮುಗಿಯಲಿ. ಪ್ಲೀಸ್ ಫ್ಯಾಮಿಲಿ ಸೇಫ್ ಮಾಡ್ಕೋಳ್ಳಿ. ದುಡ್ಡು ಆದಷ್ಟು ಬೇಗ ತಂದುಕೊಡಿ.

ಈ ಸಂಬಂಧ ಶರತ್ ಪೋಷಕರು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಶರತ್ ಮೊಬೈಲ್ ನೆಟ್ ವರ್ಕ್ ಆಧಾರದ ಮೇಲೆ ಆರೋಪಿಗಳ ಪತ್ತೆಗಾಗಿ ವಿಶೇಷ ಜಾಲ ಬೀಸಿದ್ದಾರೆ.

https://youtu.be/u3Fk-_h04H0

 

Comments

Leave a Reply

Your email address will not be published. Required fields are marked *