ಬಳ್ಳಾರಿ: ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದಲ್ಲಿನ ಅತೃಪ್ತ ಶಾಸಕರಿಗಾಗಿ 12 ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಂಸದೀಯ ಕಾರ್ಯದರ್ಶಿ, ಶಾಸಕ ತುಕಾರಾಂ ವಿರುದ್ಧ ಈಗ 6 ಕೋಟಿ ರೂಪಾಯಿ ಕಿಕ್ಬ್ಯಾಕ್ ಪಡೆದ ಗಂಭೀರ ಆರೋಪ ಎದ್ದಿದೆ.

ಸಂಡೂರು ಪಟ್ಟಣದಲ್ಲಿನ ಸೈಯೋರ ಪ್ರೆಟೋಲ್ ಬಂಕ್ನಿಂದ ಧರ್ಮಾಪುರದವರೆಗೆ ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣ, ಡಾಂಬರೀಕರಣ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಯಿಂದ 26 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದ್ರೆ 80 ಅಡಿ ರಸ್ತೆ ಅಗಲೀಕರಣಕ್ಕೆ ಅನುಮೋದನೆ ಪಡೆದು ಕೇವಲ 60 ಅಡಿ ಮಾತ್ರ ರಸ್ತೆ ಅಗಲೀಕರಣ ಮಾಡಲಾಗಿದೆ. ಆದ್ರೂ ತುಕಾರಾಂ ಅವರು ತಮ್ಮ ಪಿಎ ಹಿರೇಮಠ್ ಅವರ ಹೆಸರಿನಲ್ಲಿ ಗುತ್ತಿಗೆದಾರರಿಂದ 6 ಕೋಟಿ ಕಿಕ್ಬ್ಯಾಕ್ ಪಡೆದಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಈ ಸಂಬಂಧ, ತನಿಖೆ ನಡೆಸಬೇಕೆಂದು ಸ್ಥಳೀಯ ಹೋರಾಟಗಾರರು ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.










Leave a Reply