ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾ ಏಪ್ರಿಲ್ ನಲ್ಲಿ ಘೋಷಣೆ

ವಿಕ್ರಾಂತ್ ರೋಣ (Vikrant Rona) ಸಿನಿಮಾದ ನಂತರ ಈವರೆಗೂ ಹೊಸ ಸಿನಿಮಾದ (New Cinema) ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಕಿಚ್ಚ ಸುದೀಪ್ (Sudeep). ವಿಕ್ರಾಂತ್ ರೋಣ ಚಿತ್ರ ರಿಲೀಸ್ ಆಗಿ ಹಲವು ತಿಂಗಳು ಕಳೆದರೂ, ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಲೇ ಇದ್ದಾರೆ. ಈ ನಡುವೆ ಮೂರ್ನಾಲ್ಕು ನಿರ್ದೇಶಕರ ಹೆಸರೂ ಕೇಳಿ ಬಂದಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಸುದೀಪ್ ನಟನೆಯ ಹೊಸ ಸಿನಿಮಾದ ಘೋಷಣೆ ಏಪ್ರಿಲ್ ನಲ್ಲಿ ನಡೆಯಲಿದೆ. ಅದು ಹಲವು ಭಾಷೆಗಳಲ್ಲಿ ಮೂಡಿ ಬರುವ ಚಿತ್ರವಾಗಲಿದೆ.

ಕನ್ನಡದ ನಿರ್ದೇಶಕರಾದ ನಂದಕಿಶೋರ್ (Nandakishor), ಅನೂಪ್ ಭಂಡಾರಿ (Anoop Bhandari) ಸೇರಿದಂತೆ ಕೆಲ ನಿರ್ದೇಶಕರು ಈಗಾಗಲೇ ಸುದೀಪ್ ಗಾಗಿ ಕಥೆ ಬರೆದುಕೊಂಡು ಕೂತಿದ್ದಾರೆ. ಜೊತೆಗೆ  ಕಬಾಲಿ ಅಂತಹ ಭಾರೀ ಬಜೆಟ್ ಸಿನಿಮಾ ಮಾಡಿರುವ ಕಲೈಪುಲಿ ಎಸ್ ಥಾನು ಕೂಡ ಸುದೀಪ್ ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಈ ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವೇ ಏಪ್ರಿಲ್ ನಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬರ್ತ್‌ಡೇ ಸಂಭ್ರಮದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ವಿಜಯ್ (Vijay) ನಿರ್ದೇಶನದಲ್ಲಿ ಮೂಡಿ ಬರಲಿರುವ ಆ ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸವನ್ನೂ ಶುರು ಮಾಡಿದ್ದಾರಂತೆ ನಿರ್ದೇಶಕರು. ಈ ಸಿನಿಮಾದ ಮಾಹಿತಿಯನ್ನೂ ನಿರ್ಮಾಣ ತಂಡ ಶೀಘ್ರದಲ್ಲೇ ಹಂಚಿಕೊಳ್ಳಲಿದೆ ಎಂದೂ ಹೇಳಲಾಗುತ್ತಿದೆ. ಈ ಸಿನಿಮಾ ಕೂಡ ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗಲಿದ್ದು, ನೂರು ಕೋಟಿ ಬಜೆಟ್ ಚಿತ್ರ ಇದಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ವಿಜಯ್ ನಿರ್ದೇಶನದ ಸಿನಿಮಾ ನಂತರ ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲಾ ರಂಗ ಬಾಷಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಆ ನಂತರ ನಂದಕಿಶೋರ್ ಅವರಿಗೆ ಕಿಚ್ಚ ಡೇಟ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಸುದೀಪ್ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ.

Comments

Leave a Reply

Your email address will not be published. Required fields are marked *