ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕ ನಟನಾಗಿ ಅಭಿನಯಿಸಿರುವ `ನಾನು ಮತ್ತು ಗುಂಡ’ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಕಳೆದ ಶುಕ್ರವಾರ ಬಿಡುಗಡೆಯಾದ ಈ ಚಿತ್ರದಲ್ಲಿ ನಾಯಿ ಮತ್ತು ಮನುಷ್ಯನ ಭಾವನಾತ್ಮಕ ಸಂಬಂಧದ ಎಳೆ ಇದೆ. ಬಿಡುಗಡೆಯಾಗಿರುವ ಚಿತ್ರ ಎಲ್ಲರ ಮನಸ್ಸಿಗೂ ಹತ್ತಿರವಾಗಿದ್ದು, ಎಲ್ಲರೂ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರಕ್ಕೆ ಸಿಕ್ಕ ಗೆಲುವಿನಿಂದ ಖುಷಿಯಲ್ಲಿರುವ ಚಿತ್ರತಂಡಕ್ಕೆ ಮತ್ತೊಂದು ಡಬಲ್ ಧಮಾಕ ಸಿಕ್ಕಿದೆ. ಸ್ಯಾಂಡಲ್‍ವುಡ್ ಬಾದ್ ಶಾ ಅಭಿನಯ ಚಕ್ರವರ್ತಿ ಕಿಚ್ಚ ಕೂಡ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನಿಂದ ಸಂತಸಗೊಂಡಿದ್ದು ಟ್ವಿಟ್ಟರಿನಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದ್ರಿಂದ ಇಡೀ ಚಿತ್ರತಂಡದ ಸಂಭ್ರಮ ದುಪ್ಪಟ್ಟಾಗಿದೆ.

ಶಿವರಾಜ್ ಕೆ.ಆರ್.ಪೇಟೆ, ಸಂಯುಕ್ತ ಹೊರನಾಡ್ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಸಿಂಬ ಎನ್ನುವ ನಾಯಿ ಗುಂಡನ ಪಾತ್ರ ನಿರ್ವಹಿಸಿದ್ದು ಗುಂಡನ ಪಾತ್ರವೇ ಈ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಸದ್ಯ ಈ ಚಿತ್ರ ಪ್ರೇಕ್ಷಕನ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶ್ರೀನಿವಾಸ್ ತಿಮ್ಮಯ್ಯ ಮೊದಲ ಬಾರಿ ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದೆ.
https://twitter.com/KicchaSudeep/status/1221665624885063680

Leave a Reply