ಸ್ನೇಹ ಬೇರೆ, ನ್ಯಾಯ ಬೇರೆ, ಸಂಬಂಧನೇ ಬೇರೆ – ಕಿಚ್ಚ ಸುದೀಪ್‌

– ನನ್ನ ಕಣ್ಣಮುಂದೆ ರೇಣುಕಾಸ್ವಾಮಿ ಫ್ಯಾಮಿಲಿನೇ ಬರುತ್ತೆ

ಬೆಂಗಳೂರು: ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದಲ್ಲಿ ದರ್ಶನ್‌ ಬಂಧನದ ಕುರಿತು ಮಾತನಾಡಿರುವ ನಟ ಕಿಚ್ಚ ಸುದೀಪ್‌ (Kichcha Sudeep), ಫ್ರೆಂಡ್‌ಶಿಪ್‌ ಬೇರೆ, ನ್ಯಾಯ ಬೇರೆ, ಸಂಬಂಧ ಬೇರೆ, ನಾನು ಯಾರ ಬಗ್ಗೆಯೂ ಮಾತಾಡಿದವನಲ್ಲ. ಚಿತ್ರರಂಗ ಅಂತ ಬಂದಿದ್ದಕ್ಕೆ ಮಾತಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಹಿಂದೆ ದರ್ಶನ್‌ (Actor Darshan) ಅವರ ಮೇಲೆ ಚಪ್ಪಲಿ ಎಸೆದು ಹಲ್ಲೆಗೆ ಮುಂದಾಗಿದ್ದಾ, ಅವರ ಬೆನ್ನಿಗೆ ನಿಂತಿದ್ರಿ. ಈಗ ಸ್ನೇಹಿತರಾಗಿ ದರ್ಶನ್‌ ಬಗ್ಗೆ ಏನ್‌ ಹೇಳ್ತೀರಿ? ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, ಏನೂ ನೋವು ಬಂದಿರುತ್ತೆ ಅಂತ ಆಸ್ಪತ್ರೆಗೆ ಹೋಗ್ತೀವಿ. ಆದ್ರೆ ಅಲ್ಲಿಗೆ ಹೋದಾಗ ಬೇಡಿಕೊಳ್ಳೋದು ಅದು ಆಗದೇ ಇರಲಿ ಅಂತ. ರಿಪೋರ್ಟ್‌ನಲ್ಲಿ ಏನೂ ಆಗಿಲ್ಲ ಅಂತ ಬಂದಾಗ ಖುಷಿಯಾಗಿ ಮನೆಗೆ ಹೋಗ್ತೀವಿ. ಆಗಿದೆ ಅಂತ ಬಂದಾಗ ಟ್ರೀಟ್ಮೆಂಟ್‌ ತಗೋಬೇಕು. ನಾನು ಈಗ ಆ ಹಂತದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಸ್ನೇಹ ಬೇರೆ, ನ್ಯಾಯ ಬೇರೆ, ಸಂಬಂಧ ಬೇರೆ, ನಾನು ಯಾರ ಬಗ್ಗೆಯೂ ಮಾತಾಡಿದವನಲ್ಲ. ನನಗೆ ಬೇಕಾಗಿಯೂ ಇಲ್ಲ, ಚಿತ್ರರಂಗ ಅಂತ ಬಂದಿದ್ದಕ್ಕೆ ಮಾತಾಡುತ್ತಿದ್ದೇನೆ. ನಾನು ಚಿತ್ರರಂಗಕ್ಕೆ ಸೇರಿದವನು ಅದಕ್ಕೆ. ಇಲ್ಲಿ ಕೂತು ಜಡ್ಜ್‌ ಮಾಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

ಇವತ್ತು ನನ್ನ ಕಣ್ಮುಂದೆ ರೇಣುಕಾಸ್ವಾಮಿ ಫ್ಯಾಮಿಲಿನೇ ಬರುತ್ತೆ. ಈ ಪ್ರಕರಣದಲ್ಲಿ ನ್ಯಾಯ ಅನ್ನೋದು ತುಂಬಾನೇ ಮುಖ್ಯ. ನ್ಯಾಯದ ಮೇಲೆ ಜನರಿಗೆ ನಂಬಿಕೆ ಬರಬೇಕೆಂದರೆ, ನೊಂದ ಕುಟುಂಬಕ್ಕೆ ಒಳ್ಳೆ ನ್ಯಾಯ ಸಿಗಬೇಕು ಎಂದು ಸುದೀಪ್‌ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ- ಪವಿತ್ರಾ ಐಷಾರಾಮಿ ಜೀವನ ಬಹಿರಂಗ