ಸೆಲೆಬ್ರಿಟಿ ಅಂದ ತಕ್ಷಣ‌ ದೇವ್ರು ಅಂತ ಭಾವಿಸಬೇಡಿ – ಫ್ಯಾನ್ಸ್‌ಗೆ ಕಿಚ್ಚನ ಸಲಹೆ

ಬೆಂಗಳೂರು: ಸೆಲೆಬ್ರಿಟಿಗಳು ಅಂದ ತಕ್ಷಣ ನಾವ್ಯಾರು ದೇವರಲ್ಲ, ದೇವರೂ ಅಂತಲೂ ಭಾವಿಸಬೇಡಿ ಎಂದು ನಟ ಕಿಚ್ಚ ಸುದೀಪ್‌ (Kichcha Sudeep) ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ (Darshan) ಅವರ ವಿಚಾರ ಕುರಿತು ನಟ ಕಿಚ್ಚ ಸುದೀಪ್‌ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: Breaking: ಚಿತ್ರರಂಗಕ್ಕೆ ಕಪ್ಪುಚುಕ್ಕೆ ಬರಬಾರದು – ದರ್ಶನ್‌ ಬಂಧನ ವಿಚಾರದಲ್ಲಿ ಕಿಚ್ಚ ಸುದೀಪ್‌ ಫಸ್ಟ್‌ ರಿಯಾಕ್ಷನ್‌

ನಾನು ಮನೆಯಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ಬೈಸಿಕೊಳ್ತೀನಿ. ಸೆಲೆಬ್ರಿಟಿ ಅಂದ ಮಾತ್ರಕ್ಕೆ ನಾವ್ಯಾರೂ ದೇವರಲ್ಲ. ಅಭಿಮಾನಿಗಳು ಆ ರೀತಿ ಭಾವಿಸಬೇಡಿ. ನಾವು ಮಾಡೋದೆಲ್ಲ ಸರಿನೇ ಮಾಡಬೇಕು ಅನ್ನೋ ಒತ್ತಡವನ್ನೂ ಹಾಕಬೇಡಿ. ಏಕೆಂದರೆ ತಪ್ಪು ಮಾಡೋನೆ ಮನುಷ್ಯ, ಫ್ಲಾಪ್‌ಗಳನ್ನ ಕೊಡೋನೇ ಹೀರೋ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ- ಪವಿತ್ರಾ ಐಷಾರಾಮಿ ಜೀವನ ಬಹಿರಂಗ

ಮುಂದುವರಿದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಧ್ಯಮಗಳಲ್ಲಿ ಏನು ತೋರಿಸುತ್ತಿದ್ದೀರೋ ಅದರಿಂದಲೇ ನಾನು ತಿಳಿದುಕೊಳ್ಳುತ್ತಿದ್ದೇನೆ. ಸತ್ಯಾಂಶ ಹೊರತರಬೇಕು ಅನ್ನೋ ನಿಟ್ಟಿನಲ್ಲಿ ಮಾಧ್ಯಮಗಳು, ಪೊಲೀಸರು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವರು ಹಠ ಹಿಡಿದು ಕುಳಿತಿದ್ದಾರೆ ಅಂದ್ರೆ, ಎಲ್ಲರೂ ಸರಿಯಾದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಅರ್ಥ. ನಾನು ಅವರ ಪರ ಇವರ ಪರ ಮಾತಾಡೋದಿಲ್ಲ. ಒಟ್ಟಿನಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ, ಅವ್ರ ಪತ್ನಿ, ಮಗುವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

ಇಂದು ಒಂದಿಲ್ಲೊಂದು ವಿಚಾರಗಳಿಗೆ ಚಿತ್ರರಂಗದ ಹೆಸರು ಬರುತ್ತಿದೆ. ಜನ ಬರ್ತಿಲ್ಲ ಅಂದ್ರೆ ಚಿತ್ರರಂಗ, ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಚಿತ್ರರಂಗ, ಏನೇ ವಿಷಯ ನಡೆದರೂ ಚಿತ್ರರಂಗ ಅಂತಾರೆ. ಹಾಗಾಗಿ ಚಿತ್ರರಂಗಕ್ಕೆ ಕ್ಲಿನ್ ಚಿಟ್ ಸಿಗ್ಬೇಕು. ತಪ್ಪತಸ್ಥರಿಗೆ ಶಿಕ್ಷೆ ಆಗ್ಬೇಕು ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು