ಕೆಜಿಎಫ್ ದಾಖಲೆಯನ್ನು ಬೀಟ್ ಮಾಡುತ್ತಾ ಪೈಲ್ವಾನ್?

ಬೆಂಗಳೂರು: ಇದೀಗ ದೇಶಾದ್ಯಂತ ಕೆಜಿಎಫ್ ಚಿತ್ರದ ಅಲೆ ಜೋರಾಗಿದೆ. ಈ ಚಿತ್ರ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಇದೀಗ ವೇಗವಾಗಿ ಚಿತ್ರೀಕರಣಗೊಳ್ಳುತ್ತಿರೋ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಈ ದಾಖಲೆಯನ್ನ ಬೀಟ್ ಮಾಡೋ ಉತ್ಸಾಹದಿಂದಿದೆ!

ಪೈಲ್ವಾನ್ ಚಿತ್ರದಲ್ಲಿನ ಸುದೀಪ್ ಲುಕ್ಕು ಈ ಹಿಂದೆಯೇ ಭಾರೀ ಸದ್ದು ಮಾಡಿತ್ತು. ಇದು ವಿಶಿಷ್ಟವಾದೊಂದು ಕಥೆ ಹೊಂದಿರೋ ಚಿತ್ರ ಎಂಬ ಸುಳಿವೂ ಜಾಹೀರಾಗಿತ್ತು. ಆದರೀಗ ಇದು ಏಕಕಾಲದಲ್ಲಿಯೇ ಒಂಬತ್ತು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂಬ ವಿಚಾರ ಚಿತ್ರತಂಡದ ಕಡೆಯಿಂದಲೇ ಹೊರಬಿದ್ದಿದೆ.

ಕೆಜಿಎಫ್ ಚಿತ್ರ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರದಲ್ಲಿ ಬಿಡುಗಡೆಯಾಗಲಿದೆ. ಆದರೆ ಪೈಲ್ವಾನ್ ಚಿತ್ರ ಕನ್ನಡ, ಹಿಂದಿ, ತಮಿಳು, ತೆಲುಗು ಮಲೆಯಾಳಂ ಮತ್ತು ಮರಾಠಿ, ಪಂಜಾಬಿ, ಭೋಜ್ ಪುರಿ, ಬೆಂಗಾಲಿ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆಯಂತೆ. ಈ ಮೂಲಕ ಪೈಲ್ವಾನ್ ವಿಶ್ವವ್ಯಾಪಿಯಾಗಿಯೂ ಅಲೆಯೆಬ್ಬಿಸಲು ಅಣಿಯಾಗಿ ನಿಂತಿದೆ.

ಸುದೀಪ್ ಅವರಿಗೆ ಭಾರತದಾದ್ಯಂತ ಮಾರ್ಕೆಟ್ ಇದೆ. ಬಾಹುಬಲಿ ಚಿತ್ರದ ಮೂಲಕವೇ ಅದು ಸಾಧ್ಯವೂ ಆಗಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಚಿತ್ರತಂಡ ತೀರ್ಮಾನಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *