ಯಶ್ ವಿರುದ್ಧ ಗರಂ ಆಗಿರೋ ಅಭಿಮಾನಿಗಳಿಗೆ ಸುದೀಪ್ ಮನವಿ!

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಯಶ್ ವಿರುದ್ಧ ಸುದೀಪ್ ಫ್ಯಾನ್ಸ್ ಗರಂ ಆದ ಹಿನ್ನೆಲೆಯಲ್ಲಿ ಕಿಚ್ಚ ತನ್ನ ಅಭಿಮಾನಿಗಳ ಹತ್ತಿರ ಮನವಿ ಮಾಡಿಕೊಂಡಿದ್ದಾರೆ.

ಕಿಚ್ಚ ಸುದೀಪ್ ನಟ ಯಶ್‍ಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಸುದೀಪ್ ಚಾಲೆಂಜ್ ಸ್ವೀಕರಿಸಿದ ಯಶ್ ತಮ್ಮ ಸ್ನೇಹಿತನ ಫಿಟ್ನೆಸ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಯಶ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ಹಾಯ್ ಸುದೀಪ್ ನೀವು ನನಗೆ ಒಂದು ಚಾಲೆಂಜ್ ಕೊಟ್ಟಿದ್ದೀರಾ ಧನ್ಯವಾದಗಳು. ನಾವು ಕಲಾವಿದರಾಗಿದರಿಂದ ನಾವು ದಿನನಿತ್ಯ ವರ್ಕೌಟ್ ಮಾಡುತ್ತಿರುತ್ತೇವೆ. ಆದರೆ ನಾನು ಈ ಚಾಲೆಂಜ್‍ನಲ್ಲಿ ಒಂದು ಟ್ವಿಸ್ಟ್ ಕೊಡಲು ಯೋಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಜೀವನದಲ್ಲೇ ನನ್ನ ಸ್ನೇಹಿತ ಫಿಟ್ ಆಗಿರಲು ಸಾಧ್ಯವಿಲ್ಲ ಎಂದು ಕಾಣುವ ನನ್ನ ಸ್ನೇಹಿತನೊಬ್ಬ ಇದ್ದಾನೆ. ಆತನ ಹೆಸರು ಚೇತನ್ ಅಲಿಯಾಸ್ ಚಕ್ಕಲಿ ನನ್ನ ಬಾಲ್ಯ ಸ್ನೇಹಿತ. ಅವನಿಂದ ನಾನು ಈ ಚಾಲೆಂಜ್ ಮಾಡಿಸುತ್ತೇನೆ ಎಂದು ಹೇಳಿ ತಮ್ಮ ಸ್ನೇಹಿತನಿಂದ ಫಿಟ್ನೆಸ್ ಚಾಲೆಂಜ್ ಮಾಡಿಸಿದ್ದರು.

ವಿಡಿಯೋದಲ್ಲಿ ಯಶ್, ಕಿಚ್ಚ ಸುದೀಪ್ ಅವರನ್ನು ಹೆಸರು ಹೇಳಿ ಕರೆದಿದ್ದರು. ಇದಕ್ಕೆ ಸುದೀಪ್ ಅಭಿಮಾನಿಗಳು, ಸುದೀಪ್ ಅವರನ್ನು ಸರ್ ಎಂದು ಹೇಳಿ ಕರೆಯಬೇಕಿತ್ತು. ಆದರೆ ಬರೀ ಸುದೀಪ್ ಎಂದು ಹೇಳಿ ಕರೆದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ವಯಸ್ಸಿನಲ್ಲೂ ಅಣ್ಣನ ಸ್ಥಾನದಲ್ಲಿರುವ ಸುದೀಪ್ ಅವರ ಹೆಸರನ್ನು ಹೇಳಿ ಕರೆಯುವುದು ಎಷ್ಟು ಸರಿ ಎಂದು ಯಶ್ ವಿರುದ್ಧ ತಮ್ಮ ಆಕ್ರೋಶವನ್ನು ಸುದೀಪ್ ಅಭಿಮಾನಿಗಳು ಹೊರಹಾಕುತ್ತಿದ್ದಾರೆ.

ಈಗ ಸಾಮಾಜಿಕ ಜಾಲತಾಣದಲ್ಲಿ ಯಶ್ ವಿರುದ್ಧ ಕೆಟ್ಟ ಕಾಮೆಂಟ್ಸ್ ಕೇಳಿ ಬರುತ್ತಿದ್ದು, ಈ ರೀತಿ ಕಮೆಂಟ್ಸ್ ಮಾಡದಂತೆ ಸುದೀಪ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನನ್ನ ಹೆಸರನ್ನು ಹೇಳಿ ಕರೆದಿದ್ದಕ್ಕೆ ನನ್ನ ಸ್ನೇಹಿತರಿಗೂ ಹಾಗೂ ಅಭಿಮಾನಿಗಳಿಗೆ ಯಶ್ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಬೇಡಿ. ನನ್ನ ಈ ಮನವಿಯನ್ನು ನೀವು ಗೌರವಿಸುತ್ತೀರಿ ಎಂದು ನಾನು ಭಾವಿಸಿದ್ದೇನೆ ಎಂದು ಬರೆದು ಸುದೀಪ್ ಮನವಿ ಮಾಡಿದ್ದಾರೆ.

https://twitter.com/NimmaYash/status/1003581840563638272

Comments

Leave a Reply

Your email address will not be published. Required fields are marked *