ಕೋಟಿಗೊಬ್ಬ-3 ಚಿತ್ರ ತಂಡದಿಂದ ಗುಡ್ ನ್ಯೂಸ್

ಬೆಂಗಳೂರು: ಪೈಲ್ವಾನ್ ನಂತರ ಕಿಚ್ಚ ಸುದೀಪ್ ಬಹುನಿರೀಕ್ಷಿತ ಕೋಟಿಗೊಬ್ಬ 3 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಹಿಂದೆ ಟೀಸರ್ ಮೂಲಕ ಸೌಂಡ್ ಮಾಡಿದ್ದ ಸಿನಿಮಾ, ಇದೀಗ ಮತ್ತೊಮ್ಮೆ ಅಬ್ಬರಿಸಲು ಸಜ್ಜಾಗುತ್ತಿದೆ. ಈ ಬಾರಿ ಕಿಚ್ಚ ಸುದೀಪ್ ಬ್ಯಾಂಡ್ ಬಾರಿಸಲು ಸಿದ್ಧರಾಗಿದ್ದು, ಈ ಕುರಿತು ಆನಂದ್ ಆಡಿಯೋ ಮಾಹಿತಿ ಹಂಚಿಕೊಂಡಿದೆ. ಶೀಘ್ರವೇ ಸರ್ ಪ್ರೈಸ್ ನೀಡಲಿದ್ದೇವೆ ಎಂದು ತಿಳಿಸಿದೆ.

ಕಿಚ್ಚ ಸದೀಪ್‍ಗೆ ಎದುರಾಳಿಯಾಗಿ ರವಿಶಂಕರ್ ಕಾಣಿಕೊಳ್ಳುತ್ತಿದ್ದು, ಶಿವಕಾರ್ತಿಕ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಲಯಾಳಂ ಹಾಗೂ ತಮಿಳು ನಟಿ ಮಡೋನ್ನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೋಟಿಗೊಬ್ಬ, ಕೋಟಿಗೊಬ್ಬ-2 ಚಿತ್ರಗಳ ಯಶಸ್ಸಿನ ನಂತರ ಕಿಚ್ಚಿ ಸುದೀಪ್ ಇದೀಗ ಮೂರನೇ ಭಾಗದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಪ್ರಮುಖ ವಾಗಿದ್ದು, ಈ ಪಾತ್ರದ ಸುತ್ತಲೂ ಕಥೆ ಸುತ್ತುತ್ತದೆ ಎನ್ನಲಾಗಿದೆ.

ವಿಲನ್ ಪಾತ್ರದಲ್ಲಿ ರವಿಶಂಕರ್ ಕಾಣಿಸಿಕೊಳ್ಳುತ್ತಿದ್ದು, ಎದುರಾಳಿ ವಿರುದ್ಧ ಸೇಡು ತೀರಿಸಿಕೊಳ್ಳುವ ಪಾತ್ರವನ್ನು ಕಿಚ್ಚ ಸುದೀಪ್ ನಿರ್ವಹಿಸುತ್ತಿದ್ದಾರೆ. ಟೀಸರ್ ನಲ್ಲಿ ಕಿಚ್ಚ ಸುದೀಪ್ ಫುಲ್ ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಗೂಂಡಾಗಳ ಹೆಡೆಮುರಿ ಕಟ್ಟುವ ದೃಶ್ಯಗಳನ್ನು ತೋರಿಸಲಾಗಿತ್ತು. ಮಲೆಯಾಳಂ ಹಾಗೂ ತಮಿಳು ನಟಿ ಮಡೋನ್ನಾ ಸೆಬಸ್ಟಿಯನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಶ್ರದ್ಧಾ ದಾಸ್ ಅವರು ಇಂಟರ್ ಪೋಲ್ ಅಧಿಕಾರಿಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಅಫ್ತಾಬ್ ಶಿವದಾಸಿನಿ, ನವಾಬ್ ಶಹರೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೋಟಿಗೊಬ್ಬ-2 ಭಾರೀ ಸದ್ದು ಮಾಡುವ ಮೂಲಕ ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಅದೇ ಟೈಟಲ್‍ನ ಮೂರನೇ ಅವತರಿಣಿಕೆ ಭರ್ಜರಿ ಸದ್ದು ಮಾಡುತ್ತಿದೆ. ಅಭಿಮಾನಿಗಳಲ್ಲಿ ಕುತೂಹಲ ಹಚ್ಚಲು ಕಾರಣವಾಗಿದೆ. ಚಿತ್ರದಲ್ಲಿ ಸುದೀಪ್ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಸಿನಿಮಾ ಹೇಗಿರಲಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಟೈಟಲ್ ಟ್ರ್ಯಾಕ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಭಿಮಾನಿಗಳ ನಿರೀಕ್ಷೆಯಂತೆ ಕೋಟಿಗೊಬ್ಬ-3 ಚಿತ್ರದ ಮೊದಲ ಹಾಡು ಬಿಡುಗಡೆಗೆ ಚಿತ್ರ ತಂಡ ತಯಾರಿ ನಡೆಸಿದ್ದು, ಈ ಬಗ್ಗೆ ಆನಂದ್ ಆಡಿಯೋ ಸಂಸ್ಥೆ ಪ್ರಕಟಣೆ ಹೊರಡಿಸಿ, ಕೋಟಿಗೊಬ್ಬ-3 ಚಿತ್ರದ ಟೈಟಲ್ ಟ್ರ್ಯಾಕ್ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಈಗಾಗಲೇ ಟೀಸರ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಿನಿಮಾದ ಟೈಟಲ್ ಟ್ರ್ಯಾಕ್ ಹೇಗಿರಲಿದೆ ಎಂದು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *