ಅಭಿಮನಿಯ ಕ್ಯಾನ್ಸರ್ ಪೀಡಿತ ತಾಯಿಯ ಚಿಕಿತ್ಸೆಗೆ ಕಿಚ್ಚನ ಸಹಾಯ

ಬೆಂಗಳೂರು: ತನ್ನ ಅಭಿಮಾನಿಯ ಕ್ಯಾನ್ಸರ್ ಪೀಡಿತ ತಾಯಿಗೆ ಚಿಕಿತ್ಸೆಗೆ ಸಹಾಯ ಮಾಡಲು ಕಿಚ್ಚ ಸುದೀಪ್ ಮುಂದಾಗಿದ್ದಾರೆ.

ಸುದೀಪ್ ಅವರ ಅಭಿಮಾನಿಯಾಗಿರುವ ಲಕ್ಷ್ಮಣ್ ಗೌಡ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಸುದೀಪ್ ಅವರ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಅಭಿಮಾನಿಯ ಟ್ವೀಟ್ ಗೆ ಸುದೀಪ್ ಸಹಾಯ ನೀಡುವ ಭರವಸೆ ನೀಡಿದ್ದಾರೆ.

ಅಭಿಮಾನಿಯ ಮನವಿ ಹೀಗಿತ್ತು
“ಅಣ್ಣ ನಮ್ಮ ಅಮ್ಮ ಇವರು. ಹೆಸರು ಮಂಗಳಮ್ಮ ವಯಸ್ಸು 40. ಇವರು 4 ವರ್ಷಗಳಿಂದ ಬ್ರೆಸ್ಟ್ ಕ್ಯಾನ್ಸರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. 2 ಸಲ ಆಪರೇಷನ್ ಆಗಿದೆ. ಮತ್ತೆ ಕಾಯಿಲೆ ಜಾಸ್ತಿ ಆಗಿದೆ. ಈಗ ಮತ್ತೆ ಆಪರೇಷನ್ ಮಾಡಿಸಬೇಕು. ಮತ್ತೆ ಆಪರೇಷನ್ ಅಂದರೆ ನಾವು ತುಂಬಾ ತೊಂದರೆಯಲ್ಲಿ ಇದ್ದೇವೆ. ಆದ್ದರಿಂದ ಸಹಾಯ ಅನಿವಾರ್ಯತೆ ಇದೆ ದಯವಿಟ್ಟು ಅಣ್ಣ” ಎಂದು ಲಕ್ಷ್ಮಣ್ ಗೌಡ ಟ್ವೀಟ್ ಮಾಡಿ ಮನವಿ ಮಾಡಿದ್ದರು.

ಕಿಚ್ಚ ಸುದೀಪ್ ಯಾವಾಗಲೂ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಸದ್ಯ ಲಕ್ಷ್ಮಣ್ ಗೌಡ ಅವರ ಟ್ವೀಟ್‍ಗೆ ಕಿಚ್ಚ ಸುದೀಪ್ “ನಾನು ನನ್ನ ಕೈಯಲಾದ ಸಹಾಯ ಮಾಡುತ್ತೇನೆ. ಆಸ್ಪತ್ರೆ ಬಗ್ಗೆ ನನಗೆ ಮಾಹಿತಿ ನೀಡಿ. ನನ್ನ ಜನರು ನಿಮ್ಮನ್ನು ಅಲ್ಲಿ ಸಂರ್ಪಕಿಸುತ್ತಾರೆ. ನಿಮ್ಮ ತಾಯಿ ಬೇಗ ಗುಣಮುಖವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ” ಪ್ರತಿಕ್ರಿಯಿಸಿದ್ದಾರೆ.

ಸದ್ಯ ಕಿಚ್ಚ ಸುದೀಪ್ ಅವರ ಈ ಟ್ವೀಟ್‍ಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *