ಹೊಸದಾಗಿ ಮದುವೆ ಆದೋರಿಗೆ ಚಂದ್ರ ಒಂದೊಂದು ರೀತಿ ಕಾಣಿಸ್ತಾನೆ: ಸುದೀಪ್

ಬೆಂಗಳೂರು: ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ. ಸೂರ್ಯ ಮುಳುಗುವುದು ಬೇಕಾಗಿಲ್ಲ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಭಾರೀ ಸಂಚಲನ ಸೃಷ್ಟಿಸಿದ್ದು, ಈ ಬಗ್ಗೆ ಸ್ವತಃ ಸುದೀಪ್ ಅವರೇ ಇದೀಗ ಸ್ಪಷ್ಟನೆ ನೀಡಿದ್ದಾರೆ.

ಇಂದು ನಗರದ ಫಿಲಂ ಚೇಂಬರ್ ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಿಚ್ಚ, ನಾನು ಚಿತ್ರರಂಗಕ್ಕೆ ಬಂದು 23 ವರ್ಷ ಆಗಿದೆ. ನನಗೆ ಖುಷಿ ಏನೆಂದರೆ ನನ್ನ ಒಂದು ಟ್ವೀಟ್ ಇಷ್ಟು ಚರ್ಚೆ ಆಗುತ್ತಿದೆ ಎಂದರೆ ಎಲ್ಲೋ ಒಂದು ಕಡೆ ನಾನು ಬೆಳೆದಿದ್ದೇನೆ ಎಂದು ಅರ್ಥ. ನನ್ನ ಟ್ವೀಟ್ ನೀವು ಸೀರಿಯಸ್ ಆಗಿ ತೆಗೆದುಕೊಂಡಿದ್ದೀರಿ, ಆ ಟ್ವೀಟ್‍ಗೆ ಗೌರವ ನೀಡಿದ್ದೀರಿ ಎಂಬುದು ಅಷ್ಟೇ ಅರ್ಥ. ನನ್ನ ಟ್ವೀಟ್ ಇಷ್ಟು ಓಡುತ್ತೆ ಎಂದರೆ ನೀವು ತುಂಬಾ ಪ್ರೀತಿಯಿಂದ ಓದಿದ್ದೀರಾ ಎಂದು ಗೊತ್ತಾಗುತ್ತೆ ಎಂದು ಪ್ರತಿಕ್ರಿಯಿಸಿದ್ದಾರೆ.

ನಾನು ಯಾವತ್ತೂ ಕೆಟ್ಟ ಸಂದೇಶ ಕೊಡುವುದಿಲ್ಲ. ರಾತ್ರಿಯಾದರೆ ಎಲ್ಲರೂ ಕೂತುಕೊಂಡು ಚಂದ್ರ ನೋಡುತ್ತಿದ್ದರೆ, ಒಬ್ಬರಿಗೆ ಒಂದೊಂದು ರೀತಿಯಲ್ಲಿ ಚಂದ್ರ ಕಾಣುತ್ತದೆ. ನಿಮಗೆ ಖುಷಿಯಾದರೆ ಚಂದ್ರನನ್ನು ನೋಡಿದರೆ ಖುಷಿಯಾಗುತ್ತೆ. ದುಃಖವಾದಾಗ ಚಂದ್ರನನ್ನು ನೋಡಿದರೆ ನಿಮಗೆ ದುಃಖವಾಗುತ್ತದೆ. ಹೊಸದಾಗಿ ಮದುವೆ ಆದೋರಿಗೆ ಚಂದ್ರ ಒಂದೊಂದು ರೀತಿ ಕಾಣಿಸುತ್ತಾನೆ. ಓದುಗಾರರ ಮೇಲೆ ಇದೆ ನನ್ನ ಬರಹ ಎಂದು ಹೇಳಿದ್ದಾರೆ.

ಟ್ವೀಟ್‍ನಲ್ಲಿ ಏನಿತ್ತು?
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿರುವ ಸುದೀಪ್ ಬಹಳ ಅರ್ಥಗರ್ಭಿತವಾದ ವಾಕ್ಯವನ್ನು ಟ್ವೀಟ್ ಮಾಡಿದ್ದರು. “ನಿಜವಾದ ಗಂಡಸು ಎಂದು ಪ್ರೂವ್ ಮಾಡಲು ಮದ್ಯ ಬೇಕಿಲ್ಲ. ಸೂರ್ಯ ಮುಳುಗುವುದು ಬೇಕಾಗಿಲ್ಲ” ಎಂದು ಬರೆದಿರುವ ಸಾಲನ್ನು ನಾನು ಓದಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದರು.

ಟ್ವೀಟ್‍ನಲ್ಲಿ ತಮ್ಮ ಚಿತ್ರವಿರುವ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದರು. ಈ ಫೋಟೋದಲ್ಲಿ “ನಾನು ಹೋರಾಟ ಮಾಡಬೇಕು ಎನ್ನುವ ಕಾರಣಕ್ಕೆ ಹೋರಾಟ ಮಾಡುವುದಿಲ್ಲ. ಎದುರಾಳಿಯೊಬ್ಬ ಅರ್ಹನಿದ್ದರೆ ಮಾತ್ರ ಅಖಾಡಕ್ಕೆ ಇಳಿಯುತ್ತೇನೆ” ಎನ್ನುವ ವಾಕ್ಯವಿದೆ. ಸುದೀಪ್ ಪೈಲ್ವಾನ್ ಕಿಚ್ಚ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು.

ಈ ಟ್ವೀಟ್‍ಗೆ ಅಭಿಮಾನಿಯೊಬ್ಬರು ನಿಜವಾದ ಗಂಡಸಿಗೆ ಅಲ್ಕೋಹಾಲ್ ಬೇಕಿಲ್ಲ. ಯಾಕೆಂದರೆ ಕಿಚ್ಚನ ಅಭಿಮಾನಿಗಳು ಕಿಚ್ಚನ ವ್ಯಸನಿಗಳಾಗಿದ್ದೇವೆ. ಈಗ ಪೈಲ್ವಾನ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದೇವೆ ಎಂದು ಬರೆದು ಪ್ರತಿಕ್ರಿಯಿಸಿದ್ದರು.

Comments

Leave a Reply

Your email address will not be published. Required fields are marked *