ಬೆಂಗಳೂರು: ಅಭಿಮಾನಿಯೊಬ್ಬರು ಅಂಧ ವ್ಯಕ್ತಿಯೊಬ್ಬರಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿದ್ದಕ್ಕೆ ಸುದೀಪ್ ಅವರ ಬಗ್ಗೆ ಹೆಮ್ಮೆ ಪಟ್ಟು ಟ್ವೀಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರ ಹೆಬ್ಬುಲಿ ಹುಡ್ಗೀರು ಅಭಿಮಾನಿಗಳ ಸಂಘ ತಮ್ಮ ಮೊದಲನೇ ವರ್ಷ ಪೂರೈಸಿದೆ. ಈ ವೇಳೆ ಅವರು ಬೇರೆಯವರಿಗೆ ಸಹಾಯ ಮಾಡಿದ್ದರ ಬಗ್ಗೆ ಟ್ವೀಟ್ ಮಾಡಿ ಕಿಚ್ಚನಿಗೆ ತಿಳಿಸಿದ್ದರು.
ನಮ್ ಹೆಬ್ಬುಲಿ ಹುಡ್ಗೀರು ಮೊದಲನೇ ವಾಷಿಕೋತ್ಸವದ ಪ್ರಯುಕ್ತ ನಮ್ಮ ಅಂಧರಾಗಿರುವ ರಾಜಶೇಖರ್ ಅವರ ಪರೀಕ್ಷೆ ಬರೆಯಲು ನಮ್ಮ ಸಂಘದ ಪೂಜಾ ನೆರವಾದರು ಎಂದು ಹೆಬ್ಬುಲಿ ಹುಡ್ಗೀರು ತಂಡ ಟ್ವೀಟ್ ಮಾಡಿತ್ತು.
For 1st year anniversary of our team Hebbuli Hudgeeru pakka fans of @KicchaSudeep boss our team mate pooja hv written exam for blind person rajshekar 💐ನಮ್ ಹೆಬ್ಬುಲಿ ಹುಡ್ಗೀರು ಮೊದಲನೆ ವಾರ್ಷಿಕೋತ್ಸವ ಪ್ರಯುಕ್ತ ನಮ್ಮ ದ್ರುಷ್ಟಿ ಹೀನರಾದ ರಾಜಶೇಖರ್ ರವರ ಪರೀಕ್ಷೆ ಬರೆಯಲು ನಮ್ ಸಂಘದ ಪೂಜ ನೆರವಾದರು❤✌😍 pic.twitter.com/WpdqoGL4o1
— KICCHAGIRLSFANS ® (@kicchagirlsfans) June 5, 2018
ಹೆಬ್ಬುಲಿ ಹುಡ್ಗೀರು ತಂಡದ ಟ್ವೀಟ್ ನೋಡಿದ ಕಿಚ್ಚ ಸುದೀಪ್, “ನನಗೆ ನಿಮ್ಮ ಮೇಲೆ ಹೆಮ್ಮೆ ಇದೆ ಪೂಜಾ” ಎಂದು ಮರು ಟ್ವೀಟ್ ಮಾಡಿದ್ದಾರೆ. ಪೂಜಾ ಅವರ ಈ ಕೆಲಸದಿಂದ ಸುದೀಪ್ ಅವರಿಗೆ ಸಂತಸವಾಗಿದ್ದು, ಟ್ವಿಟ್ಟರಿನಲ್ಲಿ ತಮ್ಮ ಅಭಿಮಾನಿಯನ್ನು ಹೊಗಳಿದ್ದಾರೆ.
ಈ ಹಿಂದೆ ಸುದೀಪ್ ಹುಟ್ಟುಹಬ್ಬಕ್ಕೆ ಕೇಕ್ ತರುವುದು, ಕಟೌಟ್‍ಗೆ ಹಾಲಿನ ಅಭಿಷೇಕ ಮಾಡುವ ಬದಲು ಬೇರೆಯವರಿಗೆ ಸಹಾಯವಾಗುವ ಕೆಲಸಗಳನ್ನು ಮಾಡಿ ಎಂದು ಕೇಳಿಕೊಂಡಿದ್ದರು. ಆದರೆ ಈಗ ಅವರ ಅಭಿಮಾನಿ ಪೂಜಾ ಅಂಧ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿ ಸುದೀಪ್ ಅವರನ್ನು ಸಂತೋಷ ಪಡಿಸಿದ್ದಾರೆ.
Proud of u pooja…. https://t.co/G2kAmYvtR4
— Kichcha Sudeepa (@KicchaSudeep) June 5, 2018

Leave a Reply