ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟ, ನಿರ್ಮಾಪಕರ ಮೇಲೆ ನಡೆದ ಐಟಿ ದಾಳಿಯಾದ ಬಳಿಕ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಯಾರೂ ಟಾರ್ಗೆಟ್ ಮಾಡಿಲ್ಲ ಅವರು ಮಾಡಿರೋದನ್ನು ಪ್ರಶಂಸೆ ಮಾಡಬೇಕು ಎಂದು ಹೇಳಿದ್ದಾರೆ.
ನಿರ್ದೇಶಕರ ಸಂಘದ ಉದ್ಘಾಟನೆಗೆ ತಡವಾಗಿ ಆಗಮಿಸಿದ ಸುದೀಪ್, ಕಾರ್ಯಕ್ರಮ ಇದೆ ಎನ್ನುವುದನ್ನೇ ಮರೆತುಬಿಟ್ಟು ಊರಿಗೆ ಹೊರಟಿದ್ದೆ. ಎರಡು ದಿನಗಳಿಂದ ತುಂಬಾ ಬ್ಯುಸಿ ಇದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಬಳಿಕ ಕಾರ್ಯಕ್ರಮಕ್ಕೆ ಬರುವುದಾಗಿ ಮಾತು ಕೊಟ್ಟಿದ್ದೆ ಆದರೆ ತಡವಾಗಿದೆ. ಮರೆತಿದ್ದಕ್ಕೆ ಕ್ಷಮೆಯಿರಲಿ ಎಂದರು.

ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಹಿಂದೆ ಏನೋ ಕಾರಣ ಇರುತ್ತದೆ. ರೈಡ್ ಮಾಡಿದ ತಕ್ಷಣ ಅವರನ್ನು ವಿಲನ್ ಗಳಾಗಿ ನೋಡಲು ಆಗುವುದಿಲ್ಲ. ಆದರೆ ಸದ್ಯ ಊಹಾಪೋಹಗಳು ಹೆಚ್ಚಾಗಿದ್ದು, ನನಗೆ ಇದು ಮೊದಲ ಅನುಭವ. ನಾವು ಸರಿಯಾಗಿದ್ದರೆ ಭಯ ಪಡುವ ಅವಶ್ಯಕತೆಯೇ ಇಲ್ಲ ಎಂದು ತಿಳಿಸಿದರು.
ಇದೇ ವೇಳೆ ನಿರ್ದೇಶಕ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದ ಸುದೀಪ್, ಚಿತ್ರರಂಗದಲ್ಲಿ ಯಾವುದೇ ಸಿನಿಮಾ ಗೆದ್ದರು ಆದರ ಕ್ರೆಡಿಟ್ ಸಿಗಬೇಕಾಗಿದ್ದು ನಿರ್ದೇಶಕರಿಗೆ. ಆದರೆ, ನಿರ್ದೇಶಕರಿಗೆ ಆದರ ಕ್ರೆಡಿಟ್ ಸಿಗುವುದಿಲ್ಲ. ನನಗೂ ನಿರ್ದೇಶಕರ ಸಂಘದ ಕಾರ್ಡ್ ಇರುವುದು ಹೆಮ್ಮೆ ಎನಿಸಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply