ಬಿಗ್ ಬಾಸ್ ಫಿನಾಲೆಯಲ್ಲಿ ಕಣ್ಣೀರಿಟ್ಟ ಕಿಚ್ಚ ಸುದೀಪ್!

ಬೆಂಗಳೂರು: ಬಹು ನಿರೀಕ್ಷಿತ ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದೆ. ಎಲ್ಲರ ನಿರೀಕ್ಷೆಯಂತೆ ಹಾರೈಕೆಯಂತೆ ಭರ್ಜರಿ ಮನರಂಜನೆ ನೀಡ್ತಾ ಬಂದಿದ್ದ ಚಂದನ್ ಶೆಟ್ಟಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

ಬಿಗ್‍ಬಾಸ್ ಕರ್ನಾಟಕದಲ್ಲೇ ಅತಿ ದೊಡ್ಡ ಶೋ ಎಂದು ಹೇಳಲಾಗಿದೆ. 5 ವರ್ಷಗಳಿಂದ ಸತತವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಐದು ಆವೃತ್ತಿಯಲ್ಲೂ ನಟ ಸುದೀಪ್ ನಿರೂಪಕರಾಗಿ ಜನರ ಮನಸನ್ನು ಗೆದ್ದಿದ್ದಾರೆ. ಸ್ಪರ್ಧಿಗಳು 3 ತಿಂಗಳು ಕಾಲ ಹೊರಗಿನ ಜಗತ್ತಿನ ಜೊತೆ ಯಾವುದೇ ಸಂಪರ್ಕವಿಲ್ಲದೆ ಒಂದೇ ಮನೆಯಲ್ಲಿ ತಮ್ಮ ಸಹ-ಸ್ಪರ್ಧಿಗಳ ಜೊತೆ ಕಾಲ ಕಳೆಯುತ್ತಾರೆ. ಅಷ್ಟೇ ಅಲ್ಲದೇ ಕೊಟ್ಟಿರುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಈ ಐದು ಸೀಸನ್ ನಲ್ಲಿ ಸುದೀಪ್ ನಿರೂಪಕರಾಗಿದ್ದು, ಅವರು ಹೇಗೆ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ಅವರು ನಡೆದು ಬಂದ ಹಾದಿ ಹೇಗಿತ್ತು ಎಂಬುದು ಬಿಗ್‍ಬಾಸ್ ಒಂದು ವಿಡಿಯೋ ಮೂಲಕ ಅದನ್ನು ಸುದೀಪ್ ಗೆ ತೋರಿಸಿದ್ದರು. ಮೊದಲ ಸೀಸನ್ ನಿಂದ ಐದನೇ ಸೀಸನ್‍ವರೆಗೂ ನಡೆದ ಎಲ್ಲ ಪಂಚಾಯ್ತಿ, ಬಿಗ್‍ಬಾಸ್ ವೇದಿಕೆಯಲ್ಲಿ ಅತಿಥಿಯಾಗಿ ಬಂದವರ ಜೊತೆ ಕಾಲ ಕಳೆದಿದ್ದು, ಎಲ್ಲವನ್ನೂ ಆ ವಿಡಿಯೋದಲ್ಲಿ ತೋರಿಸಲಾಗಿತ್ತು.

ಭಾವುಕರಾದ್ರು ಕಿಚ್ಚ: ಈ ವೇಳೆ ಸಿಸಿಎಲ್‍ನಲ್ಲಿ ಕಿಚ್ಚ ಸಾರಥ್ಯದಲ್ಲಿ ಆಡುವ ಕರ್ನಾಟಕ ಬುಲ್ಡೋಜರ್ ತಂಡ ಬಿಗ್‍ಬಾಸ್ ಸೀಸನ್ 1ರಲ್ಲಿ ಆಗಮಿಸಿತ್ತು. ಸುದೀಪ್ ನಡೆಸಿಕೊಡುವ ಕಾರ್ಯಕ್ರಮ ಹಾಗೂ ಸ್ಪರ್ಧಿಗಳ ಬಗ್ಗೆ ತಂಡದ ಎಲ್ಲ ಸದಸ್ಯರು ಮಾತನಾಡಿದ್ದರು. ಆಗ ದಿವಗಂತ ದೃವ ಶರ್ಮಾ ತಮ್ಮದೇ ಶೈಲಿಯಲ್ಲಿ ಬಿಗ್‍ಬಾಸ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದರು. ಆ ಕ್ಷಣವನ್ನು ಸ್ಪೆಶಲ್ ವಿಟಿಯಲ್ಲಿ ಸೆರೆ ಹಿಡಿದು ಅದನ್ನು ಬಿಗ್‍ಬಾಸ್ ಸೀಸನ್ 5 ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರಿಗೆ ತೋರಿಸಿದ್ದರು.

ಆ ವಿಡಿಯೋದಲ್ಲಿ ದೃವ ಶರ್ಮಾ ಅವರನ್ನು ನೋಡಿ ಕಿಚ್ಚ ಸುದೀಪ್ ಒಂದು ಕ್ಷಣ ಭಾವುಕರಾದರು. ಅಷ್ಟೇ ಅಲ್ಲದೇ ದೃವ ಅವರ ಗೆಳೆಯರಾದ ಜಯರಾಂ ಕಾರ್ತಿಕ್ (ಜೆಕೆ) ಕೂಡ ಕಣ್ಣೀರಿಟ್ಟರು. ಸುಮಾರು ವರ್ಷಗಳಿಂದ ದೃವ ಅವರು ಸಿಸಿಎಲ್‍ನಲ್ಲಿ ಆಟುತ್ತಿದ್ದರು. ದೃವ ಕ್ರಿಕೆಟ್ ಆಟಗಾರನಲ್ಲದೇ ಸಿನಿಮಾದಲ್ಲೂ ಕೂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಬುಲ್ಡೋಜರ್ ತಂಡ ಬೆಂಗಳೂರು-560023 ಚಿತ್ರವೊಂದರಲ್ಲಿ ನಟಿಸಿದ್ದರು. ಅದರಲ್ಲಿಯೂ ದೃವ ಶರ್ಮಾ ನಟಿಸಿದ್ದರು.

ದೃವ ಶರ್ಮಾ ಕಿಚ್ಚು ಎಂಬ ಚಿತ್ರದಲ್ಲಿ ಕೊನೆಯಾದಾಗಿ ಬಣ್ಣ ಹಚ್ಚಿದ್ದರು. ಆ ಚಿತ್ರಕ್ಕೆ ಕಿಚ್ಚ ಸುದೀಪ್ ಹಿನ್ನಲೆ ಧ್ವನಿಯನ್ನು ನೀಡಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ದೃವ ವಿಧಿವಶರಾಗಿದ್ದರು.

ಸದ್ಯ ಬಿಗ್‍ಬಾಸ್ ಸೀಸನ್ 5 ಫಿನಾಲೆ ಮುಗಿದಿದ್ದು, ಕನ್ನಡ ನಾಡಿನಲ್ಲಿ ‘ಮೂರೇ ಮೂರು ಪೆಗ್ಗು’ ಹಾಡಿನ ಮೂಲಕ ಫೀನಿಕ್ಸ್‍ನಂತೆ ಎದ್ದು ಬಂದ ಅದೇ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು ನುಡಿದ್ದ ಚಂದನ್ ಶೆಟ್ಟಿಗೆ ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿದೆ.

Comments

Leave a Reply

Your email address will not be published. Required fields are marked *