ಅಭಿಮಾನಿಗಳ ಗಮನ ಸೆಳೆಯುತ್ತಿದೆ ಸುದೀಪ್, ರಮ್ಯಾ ಮಾತುಗಳು

ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿಟ್ ಪೇರ್ ಲಿಸ್ಟ್ ಗಳಲ್ಲಿ ಒಂದಾಗಿರುವ ಸುದೀಪ್ ರಮ್ಯಾ ಜೋಡಿ ಈಗ ಟ್ವಿಟರ್‍ನಲ್ಲಿ ಒಬ್ಬರನ್ನೊಬ್ಬರು ಮಾತಾಡಿಕೊಂಡಿದ್ದಾರೆ.

ಅಭಿ ಚಿತ್ರ ರಿಲೀಸ್ ಆಗಿ ಇಂದಿಗೆ 14 ವರ್ಷ. ಹೀಗಾಗಿ ಈ ಚಿತ್ರದ ಮೂಲಕ ಎಂಟ್ರಿ ಕೊಟ್ಟ ರಮ್ಯಾಗೆ ಸುದೀಪ್ ಟ್ವಿಟ್ಟರ್ ಮೂಲಕ 14 ವರ್ಷದ ಚಿತ್ರದ ಜರ್ನಿಗೆ ಶುಭಾಷಯ ಕೋರಿದ್ದಾರೆ.

ಅದಕ್ಕೆ ಪ್ರತಿಯಾಗಿ ರಮ್ಯಾ ಧನ್ಯವಾದ ಸುದೀಪ್, ಒಬ್ಬ ಸಹನಟನಾಗಿ ನೀವು ಅದ್ಭುತ ನೆನಪುಗಳನ್ನ ಕೊಟ್ಟಿದ್ದೀರಾ ಅಂತ ಬರೆದುಕೊಂಡಿದ್ದಾರೆ. ಇವರಿಬ್ಬರ ಈ ಟ್ವಿಟರ್ ಮಾತುಕಥೆ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ನಾಲ್ಕು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದ ರಮ್ಯಾ ಮತ್ತು ಸುದೀಪ್ ಕಿಚ್ಚ ಹುಚ್ಚ ಚಿತ್ರದ ನಂತ್ರ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ರಮ್ಯಾ ಮತ್ತು ಸುದೀಪ್ ನಡುವೆ ಸಂಬಂಧ ಸರಿಯೇನಿಲ್ಲ ಅನ್ನೋ ಮಾತುಗಳು ಸ್ಯಾಂಡಲ್‍ವುಡ್‍ನಲ್ಲಿ ಹರಿದಾಡುತಿತ್ತು. ಆದರೆ ರಮ್ಯಾಗೆ ಈಗ ಶುಭಾಶಯ ಹೇಳುವುದರ ಮೂಲಕ ಸುದೀಪ್ ಈ ಎಲ್ಲ ಅಂತೆ ಕಂತೆ ಸುದ್ದಿಗಳಿಗೆ ತೆರೆಎಳೆದಿದ್ದಾರೆ.

ಜಸ್ಟ್ ಮಾತ್ ಮಾತಲ್ಲಿ, ರಂಗ ಎಸ್‍ಎಸ್‍ಎಲ್‍ಸಿ, ಮುಸ್ಸಂಜೆಯ ಮಾತು, ಕಿಚ್ಚ ಹುಚ್ಚ ಚಿತ್ರದಲ್ಲಿ ಸುದೀಪ್, ರಮ್ಯಾ ಜೊತೆಯಾಗಿ ನಟಿಸಿದ್ದರು.

ಪ್ರತಿಷ್ಟಿತ ವಜ್ರೇಶ್ವರಿ ಕಂಬೈನ್ಸ್ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟ ರಮ್ಯಾ, ರಾಜ್ ಕುಟುಂಬಕ್ಕೆ ತೀರಾ ಆಪ್ತರು. ಈ ಕಾರಣಕ್ಕಾಗಿ ಅಪ್ಪು ಜೊತೆ ಮೂರು ಸಿನಿಮಾಗಳಲ್ಲಿ ನಟಿಸುವ ಅವಕಾಶ ರಮ್ಯಾಗೆ ಮಾತ್ರ ಸಿಕ್ಕಿದೆ. ಮೂಲ ಹೆಸರು ದಿವ್ಯ ಸ್ಪಂದನ ಆಗಿದ್ರೂ ಚಿತ್ರರಂಗಕ್ಕೆ ರಮ್ಯಾ ಅಂತ ನಾಮಕರಣ ಮಾಡಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಪರಿಚಯಿಸಿದ್ದರು.

ಅಭಿ ಚಿತ್ರದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ರಮ್ಯಾ ಮುಂದೆ ದಶಕಗಳ ಕಾಲ ಸ್ಯಾಂಡಲ್‍ವುಡ್ ಕ್ವೀನ್ ಆಗಿ ಮೆರೆದಿದ್ದರು. ರಾಜಕೀಯಕ್ಕೆ ಸೇರಿದ ಮೇಲೆ ರಮ್ಯಾ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದಾರೆ.

ಇದನ್ನೂ ಓದಿ: ದರ್ಶನ್ ಜೊತೆ ಸಿನಿಮಾ ಮಾಡ್ತೀರಾ: ಅಭಿಮಾನಿಯ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದು ಹೀಗೆ

https://twitter.com/pp66281/status/856762474665783296

Comments

Leave a Reply

Your email address will not be published. Required fields are marked *