ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌

ಕಿಚ್ಚ ಸುದೀಪ್ (Sudeep) ಹುಟ್ಟು ಹಬ್ಬಕ್ಕೆ ಬಿಗ್‌ ಬಾಸ್‌ (Bigg Boss) 12ನೇ ಆವೃತ್ತಿಯ ಮೊದಲ ಪ್ರೋಮೋವನ್ನು ಕಲರ್ಸ್‌ ಕನ್ನಡ (Colors Kannada) ಬಿಡುಗಡೆ ಮಾಡಿದೆ.

ಮಾರ್ಕ್ ಸಿನಿಮಾದ ವಿಶೇಷ ಗೆಟಪ್‌ನಲ್ಲಿ ಸುದೀಪ್‌ (Sudeep) ಪ್ರೋಮೋದಲ್ಲಿ ಭಾಗಿಯಾಗಿದ್ದಾರೆ. ಸೆಪ್ಟೆಂಬರ್ 28 ರಿಂದ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಆಗಲಿದ್ದು ಇಡೀ ಕರ್ನಾಟಕವನ್ನು ಒಳಗೊಳ್ಳುವಂಥ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ ವಾಹಿನಿ ಹೇಳಿದೆ.


ಎಂದಿನಂತೆ ಎಲ್ಲಾ ಕ್ಷೇತ್ರಗಳ ಸ್ಪರ್ಧಿಗಳನ್ನು ಆಯ್ಕೆ ಮಾಡುವುದಾಗಿ ವಾಹಿನಿ ಹೇಳಿಕೊಂಡಿದೆ. ಇದನ್ನೂ ಓದಿ: `ತಿಪ್ಪರ್‌ಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡʼ ದರ್ಶನ್‌ಗೆ ಸುದೀಪ್‌ ಹೀಗಂದಿದ್ಯಾಕೆ?

ಸ್ಯಾಂಡಲ್‌ವುಡ್ ಬಾದ್ ಷಾ ಎಂದೇ ಖ್ಯಾತಿ ಪಡೆದುಕೊಂಡಿರುವ ನಟ ಸುದೀಪ್‌ ಅವರು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಿಗ್‌ಬಾಸ್‌ ತಂಡ ಇಂದು ಸಂಜೆ ಬಿಗ್‌ ಅಪ್‌ಡೇಟ್ ನೀಡಲಾಗುವುದು ಎಂದು ಕಲರ್ಸ್ ಕನ್ನಡ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿತ್ತು.