ತಾವು ನಟಿಸಿದ ಸಿನಿಮಾವನ್ನೇ ನೋಡಿ ಗಳಗಳನೇ ಅತ್ತ ಕಿಯಾರಾ

ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತಾವು ನಟಿಸಿದ ಸಿನಿಮಾವನ್ನೇ ನೋಡಿ ಗಳಗಳನೇ ಅತ್ತ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್‍ನ ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ಶೇರ್ ಷಾ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ. ಆಗಸ್ಟ್ 12ರಂದು ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆಗೊಂಡ ಈ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ಎಲ್ಲರಿಗೂ ಖಂಡಿತವಾಗಿ ಕಣ್ಣೀರು ತರಿಸುತ್ತದೆ. ನೈಜ ಘಟನೆಯಾಧಾರಿತ ಈ ಸಿನಿಮಾ ಇದೀಗ ಬಾಲಿವುಡ್‍ನಲ್ಲಿ ಬಾರೀ ಸದ್ದು ಮಾಡುತ್ತಿದೆ.

ಸದ್ಯ ವಿಮಾನದಲ್ಲಿ ಪ್ರಯಾಣಿಸುತ್ತಿರುವ ವೇಳೆ ಕಿಯಾರಾ ಅಡ್ವಾಣಿ ಶೇರ್ ಷಾ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ನೋಡಿ ಗಳಗಳನೇ ಅತ್ತಿದ್ದಾರೆ. ಇನ್ನೂ ಈ ವೀಡಿಯೋವನ್ನು ಕಿಯಾರಾ ಅಭಿಮಾನಿಗಳು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನೀರಿನ ಒಳಗಡೆ ಹಾಟ್ ಅವತಾರ – ಕಿಯಾರಾ ಫೋಟೋ ವೈರಲ್

ಶೇರ್ ಷಾ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಕ್ಯಾಪ್ಟನ್ ವಿಕ್ರಮ್ ಪಾತ್ರದಲ್ಲಿ ಅಭಿನಯಿಸಿದ್ದು, ವಿಕ್ರಮ್‍ಗೆ ಜೋಡಿಯಾಗಿ ಡಿಂಪಲ್ ಪಾತ್ರದಲ್ಲಿ ಕಿಯಾರಾ ಕಾಣಿಸಿಕೊಂಡಿದ್ದಾರೆ. ಕ್ಯಾಪ್ಟನ್ ವಿಕ್ರಮ್‍ರನ್ನು ಮದುವೆಯಾಗಬೇಕಿದ್ದು ಕಾಯುತ್ತಿದ್ದ ಡಿಂಪಲ್ ಕನಸು ಕೊನೆಗೆ ನನಸಾಗುವುದಿಲ್ಲ. ಆದರೆ ಡಿಂಪಲ್ ಇಂದಿಗೂ ಮದುವೆಯಾಗದೇ ವಿಕ್ರಮ್ ನೆನಪಿನಲ್ಲಿಯೇ ಉಳಿದಿದ್ದು, ಚಂಡೀಗಢದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸದ್ಯ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಇಬ್ಬರು ಲವ್ವಿ-ಡವ್ವಿಯಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ ಇತ್ತೀಚೆಗಷ್ಟೇ ನಾವಿಬ್ಬರೂ ಉತ್ತಮ ಫ್ರೆಂಡ್ಸ್ ಎಂದು ಹೇಳುವ ಮೂಲಕ ಗಾಸಿಪ್‍ಗಳಿಗೆ ಕಿಯಾರಾ ಫುಲ್ ಸ್ಟಾಪ್ ಇಟ್ಟಿದ್ದಾರೆ.  ಇದನ್ನೂ ಓದಿ:ಟಾಪ್‍ಲೆಸ್ ಫೋಟೋ ಶೂಟ್‍ನಲ್ಲಿ ನಟಿ ಕಿಯಾರಾ ಅಡ್ವಾಣಿ ಸಖತ್ ಹಾಟ್

Comments

Leave a Reply

Your email address will not be published. Required fields are marked *