600 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ ಕಲಘಟಗಿ ಖಾಸ್ನಿಸ್ ಬ್ರದರ್ಸ್ ಬಂಧನ

ಧಾರವಾಡ: ಕೋಟಿ ಕೋಟಿ ಹಣ ವಂಚನೆ ಮಾಡಿ ಪರಾರಿಯಾಗಿದ್ದ ಖಾಸ್ನಿಸ್ ಸಹೋದರರು ಕೊನೆಗೂ ಬೆಂಗಳೂರಿನಲ್ಲಿ ಸಿಐಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸತ್ಯಬೋಧ, ಸಂಜೀವ ಹಾಗೂ ಶ್ರೀಕಾಂತ ಸಹೋದರರು ಉತ್ತರ ಕರ್ನಾಟಕದ ಜನರಿಗೆ ಕೋಟ್ಯಾಂತರ ರೂ. ಹಣ ವಂಚನೆ ಮಾಡಿ ಕಳೆದ ಏಪ್ರಿಲ್ 10ರಂದು ಪರಾರಿಯಾಗಿದ್ರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆಯೇ ಸರ್ಕಾರ ಪ್ರಕರಣವನ್ನ ಸಿಐಡಿಗೆ ಒಪ್ಪಿಸಿತು. ಸಿಐಡಿ ಎಸ್‍ಪಿ ಸಿದ್ದರಾಮಯ್ಯ ನೇತೃತ್ವದ ತಂಡ ಈ ವಂಚರಕನ್ನು ಬಂಧಿಸಿದ್ದು, ಇಂದು ಧಾರವಾಡ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಹರ್ಷಾ ಎಂಬ ಕಂಪನಿ ತೆರೆದು 1 ಲಕ್ಷಕ್ಕೆ 7 ಸಾವಿರ ರೂಪಾಯಿ ಬಡ್ಡಿ ನೀಡುವದಾಗಿ ಜನರನ್ನ ನಂಬಿಸಿ 600 ಕೋಟಿಗೂ ಹೆಚ್ಚು ಹಣ ವಂಚಿಸಿ ಪರಾರಿಯಾಗಿದ್ರು. ಇನ್ನು ಸಿಐಡಿ ಅಧಿಕಾರಿಗಳ ತಂಡ ರಾತ್ರಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿ ದಾಖಲೆಗಳನ್ನ ಪರಿಶೀಲಿಸಿದೆ ಎಂದು ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *