ಭಾರತಕ್ಕೆ ಮೋಸ್ಟ್‌ ವಾಂಟೆಡ್‌ ಆಗಿದ್ದ ಖಲಿಸ್ತಾನಿ ಉಗ್ರ ಗುಂಡಿನ ದಾಳಿಗೆ ಬಲಿ

ಒಟ್ಟಾವಾ: ಕೆನಡಾದ ಸರ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತಕ್ಕೆ ಮೋಸ್ಟ್‌ ವಾಂಟೆಡ್‌ ಆಗಿದ್ದ ಖಲಿಸ್ತಾನಿ ಉಗ್ರ (Khalistani Terrorist) ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಬಲಿಯಾಗಿದ್ದಾನೆ.

ಇತ್ತೀಚೆಗೆ ಭಾರತ ಸರ್ಕಾರ (Government Of India) ಬಿಡುಗಡೆ ಮಾಡಿದ 40 ಉಗ್ರರ ಪಟ್ಟಿಯಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಪ್ರಮುಖ ಉಗ್ರನಾಗಿದ್ದ.

2022 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪಂಜಾಬ್‌ನ ಜಲಂಧರ್‌ನಲ್ಲಿ ಹಿಂದೂ ಅರ್ಚಕನನ್ನು ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಸಲು ಸಕಲ ಪ್ರಯತ್ನ ನಡೆದಿತ್ತು. ಆದ್ರೆ ಆರೋಪಿ ಎಸ್ಕೇಪ್‌ ಆಗಿದ್ದರಿಂದ ನಿಜ್ಜರ್‌ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ಇದನ್ನೂ ಓದಿ: ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

ಈ ಹಿಂದೆ ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನ ಎಸಗಿದ್ದ ಪ್ರಕರಣದಲಿ ನಿಜ್ಜರ್ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಕೂಡ ಸಲ್ಲಿಸಿತ್ತು. ಭಾರತದಿಂದ ಪರಾರಿಯಾಗಿದ್ದ ನಿಜ್ಜರ್‌ ಕೆನಡಾದಲ್ಲಿ ನೆಲೆಸಿದ್ದ, ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನೂ ಆಗಿದ್ದ ಅನ್ನೋದು ತಿಳಿದುಬಂದಿದೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ತ್ರಿವರ್ಣ ಧ್ವಜ ತೆಗೆದಿದ್ದ ಖಲಿಸ್ತಾನಿ ಉಗ್ರ ಅವತಾರ್ ಸಿಂಗ್ ನಿಗೂಢ ಸಾವು

ಇತ್ತೀಚೆಗಷ್ಟೇ ಖಲಿಸ್ತಾನಿ ಉಗ್ರ ಅಮೃತಪಾಲ್ ಸಿಂಗ್ ಆಪ್ತ, ಬ್ರಿಟನ್ ಮೂಲದ ಖಲಿಸ್ತಾನ್ ಲಿಬರೇಷನ್ ಫೋರ್ಸ್ (KLF) ಮುಖ್ಯಸ್ಥ ಅವತಾರ್ ಸಿಂಗ್ ಖಂಡಾ ನಿಗೂಢವಾಗಿ ಸಾವನ್ನಪ್ಪಿದ್ದ. ಈತನನ್ನ ವಿಷ ಉಣಿಸಿ ಸಾಯಿಸಲಾಗಿದೆ ಎಂದು ಶಂಕೆ ವ್ಯಕ್ತವಾದರೂ ವೈದ್ಯಕೀಯ ದಾಖಲೆಗಳು ರಕ್ತ ಕ್ಯಾನ್ಸರ್ ಎಂದು ಹೇಳಿದ್ದವು.

ಯಾರು ಅವತಾರ್ ಸಿಂಗ್?
2007ರಲ್ಲಿ ಶಿಕ್ಷಣ ವೀಸಾದಡಿ ಬ್ರಿಟನ್‌ಗೆ ತೆರಳಿದ್ದ ಅವತಾರ್ ಸಿಂಗ್ 2012ರಿಂದ ಅಲ್ಲಿಯೇ ನೆಲೆಸಿದ್ದ. ಬಾಂಬ್ ತಜ್ಞನಾಗಿದ್ದ ಖಂಡಾ, ಲಂಡನ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿಯ ಮೇಲೆ ಆಕ್ರಮಣ ಮಾಡಿಸಿದವರ ಪೈಕಿ ಈತ ಪ್ರಮುಖ ಆರೋಪಿಯಾಗಿದ್ದ. ದೂತವಾಸ ಕಚೇರಿ ಮೇಲಿದ್ದ ತ್ರಿವರ್ಣ ಧ್ವಜ ತೆಗೆದು ಖಲಿಸ್ತಾನ್‌ ಧ್ವಜ ಹಾರಿಸಿದ್ದ.

ಪಂಜಾಬ್ ಪೊಲೀಸರು ಮಾರ್ಚ್‌ ಮತ್ತು ಏಪ್ರಿಲ್‌ ಅವಧಿಯಲ್ಲಿ ಖಲಿಸ್ತಾನಿ ಮುಖಂಡ ಅಮೃತಪಾಲ್ ಸಿಂಗ್‌ ಬಂಧನಕ್ಕೆ ತೀವ್ರ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆತ ತಲೆಮರೆಸಿಕೊಳ್ಳಲು ಅವತಾರ್ ಖಾಂಡಾ ನೆರವಾಗಿದ್ದ. ಅಮೃತಪಾಲ್‌ನನ್ನು ಪೊಲೀಸರು ಬೆನ್ನಟ್ಟಿದಾಗ ಆತ ಲಂಡನ್‌ನಲ್ಲಿದ್ದ ಅವತಾರ್ ಜತೆ ಸಂಪರ್ಕದಲ್ಲಿದ್ದ ವಿಚಾರ ಪೊಲೀಸ್‌ ತನಿಖೆಯಿಂದ ಬೆಳಕಿಗೆ ಬಂದಿತ್ತು.