ಮತಾಂತರ ಕಾಯ್ದೆ ಸಂವಿಧಾನಕ್ಕೆ ವಿರುದ್ಧ: ಕೆಎಚ್ ಮುನಿಯಪ್ಪ

ಕೋಲಾರ: ಮತಾಂತರ ಕಾಯ್ದೆ ಆರೋಗ್ಯಕರವಲ್ಲ, ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಕೆಎಚ್ ಮುನಿಯಪ್ಪ ವಾಗ್ದಾಳಿ ನಡೆಸಿದರು.

ಕೋಲಾರದ ಸಾಯಿಬಾಬಾ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಮತಾಂತರ ಕಾಯ್ದೆಯಿಂದ ಪ್ರಜಾಪ್ರಭುತ್ವದಲ್ಲಿ ಮನುಷ್ಯನಿಗೆ ಸಂವಿಧಾನಬದ್ಧವಾದ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಒಬ್ಬ ಮನುಷ್ಯನಿಗೆ ಮೂಲಭೂತವಾದ ಹಕ್ಕು ಇಲ್ಲದಿದ್ದರೆ ಸ್ವಾತಂತ್ರ್ಯವಿಲ್ಲದಂತೆ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಮನುಷ್ಯನಿಗೆ ಹುಟ್ಟುವಾಗ ಜಾತಿ, ಧರ್ಮ ಇರುವುದಿಲ್ಲ. ಆದರೆ ಮನುಷ್ಯ ಜ್ಞಾನವಂತ ಆದ ಮೇಲೆ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಹಕ್ಕಿದೆ. ಇದನ್ನು ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ನೀಡಿದ್ದಾರೆ. ಇಂತಹ ಹಕ್ಕನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಬಾರದು ಎಂದರು. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿರುವ ಬ್ಯಾಗ್ ತರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆ

ಮತಾಂತರ ಕಾಯ್ದೆ ಅವಶ್ಯಕತೆ ಇರಲಿಲ್ಲ, ಬಿಜೆಪಿ ಅವರು ಯಾವ ಕಾರಣಕ್ಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಸ್ವಯಿಚ್ಛೆಯಿಂದ ಮತಾಂತರ ಆಗುವುದು ಅವರ ಹಕ್ಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಜನರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಜನರಿಗೆ ಬ್ರಾತೃತ್ವ, ಸ್ವಾತಂತ್ರ್ಯವಾಗಿ ಬಾಳಿ ಬದುಕಲು ಬಿಡುತ್ತಿಲ್ಲ. ಜನರು ಈಗಾಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಸ್ತೆ, ರಸ್ತೆಯಲ್ಲಿ ಕುಣಿಯುವುದಕ್ಕೆ ಬ್ರೇಕ್ ಹಾಕಿ ಬಾರ್, ರೆಸ್ಟೋರೆಂಟ್ ನಿಯಮ ಸಡಿಲಿಸಿ: ಗೋವಿಂದರಾಜ್ ಹೆಗ್ಡೆ

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿಲ್ಲ ಎಂದು ಇಲ್ಲಿನ ಶಾಸಕರು ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ ಎಂದರು.

Comments

Leave a Reply

Your email address will not be published. Required fields are marked *