ಕೆಜಿಎಫ್ 2 ಬದಲು ಕೆಜಿಎಫ್ 1 ಪ್ರದರ್ಶನ, ಆಕ್ರೋಶಗೊಂಡ ಅಭಿಮಾನಿಗಳು

ಇಂದು ವಿಶ್ವದಾದ್ಯಂತ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್ ಆಗಿದೆ. ಮಧ್ಯರಾತ್ರಿ 12 ಗಂಟೆಯಿಂದಲೇ ಅಭಿಮಾನಿಗಳು ಸಿನಿಮಾ ವೀಕ್ಷಿಸುತ್ತಿದ್ದಾರೆ. ಆದರೆ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಥಿಯೇಟರ್ ನಲ್ಲಿ ಅಚಾತುರ್ಯವೊಂದು ನಡೆದು ಹೋಗಿದೆ. ಅದಕ್ಕಾಗಿ ಅಭಿಮಾನಿಗಳು ಕೂಡ ಆಕ್ರೋಶಗೊಂಡಿದ್ದಾರೆ.  ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

ವೀರೇಶ್ ಚಿತ್ರಮಂದಿರದಲ್ಲಿ ಬೆಳಗಿನ ಜಾವ 5 ಗಂಟೆಗೆ ಎರಡು ಸ್ಕ್ರೀನ್ ಗಳಲ್ಲಿ ಕೆಜಿಎಫ್ 2 ಸಿನಿಮಾ ಪ್ರದರ್ಶನವಾಗಬೇಕಿತ್ತು. ಈ ಚಿತ್ರಮಂದಿರದಲ್ಲಿ ಎರಡು ಸ್ಕ್ರೀನ್ ಗಳದ್ದು, ಅಭಿಮಾನಿಗಳು ಒತ್ತಾಯದ ಮೇರೆಗೆ ಮತ್ತು ಒಂದು ಸ್ಕ್ರೀನ್ ನಲ್ಲಿ ಟಿಕೆಟ್ ಸೋಲ್ಡೌಟ್ ಆಗಿದ್ದರಿಂದ ಮತ್ತೊಂದು ಸ್ಕ್ರೀನ್ ನಲ್ಲೂ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ ಎರಡೂ ಸ್ಕ್ರೀನ್ ನಲ್ಲೂ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಬೇಕಿತ್ತು.  ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

ಬೆಳಗ್ಗೆ ಅಭಿಮಾನಿಗಳು 5 ಗಂಟೆಗೆ ಎರಡೂ ಸ್ಕ್ರೀನ್ ಮುಂದೆ ಜಮಾಯಿಸಿದ್ದರು. ತಮ್ಮ ತಮ್ಮ ಸೀಟ್‍ ನಲ್ಲಿ ಕುಳಿತುಕೊಂಡು ಕೆಜಿಎಫ್ ಚಾಪ್ಟರ್ 2 ಕಣ್ತುಂಬಿಕೊಳ್ಳಬೇಕು ಎನ್ನುವಷ್ಟರಲ್ಲಿ ಕೆಜಿಎಫ್ 1 ಸಿನಿಮಾ ತೆರೆಯ ಮೇಲಿತ್ತು. ಬರೋಬ್ಬರಿ ಇಪ್ಪತ್ತು ನಿಮಿಷಗಳ ಕಾಲ ಕೆಜಿಎಫ್ 1 ಪ್ರದರ್ಶನವಾಗಿದೆ. ಮೊದ ಮೊದಲು ಪ್ರೇಕ್ಷಕರು ಹೀಗೆಕೆ ಆಗುತ್ತಿದೆ ಎಂದು ಗೊಂದಲಕ್ಕೊಳಗಾದರು. ಸ್ವಲ್ಪ ಹೊತ್ತು ಮೊದಲ ಭಾಗ ತೋರಿಸಿ, ಆನಂತರ ಎರಡನೇ ಭಾಗಕ್ಕೆ ಶಿಫ್ಟ್ ಆಗುತ್ತಾರೆ ಎಂದುಕೊಂಡವರು ಅದೇ ಸಿನಿಮಾ ಮುಂದುವರೆದಿದ್ದರಿಂದ ಅಭಿಮಾನಿಗಳು ಆಕ್ರೋಶಗೊಂಡರು. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

ಈ ಸುದ್ದಿ ಥಿಯೇಟರ್ ಮುಖ್ಯಸ್ಥರಿಗೆ ತಿಳಿಯುತ್ತಿದ್ದಂತೆಯೇ ಇದೊಂದು ಅಚಾತುರ್ಯದಿಂದ ಆದ ಕೆಲಸ. ಸರಿ ಮಾಡಿಕೊಳ್ಳುತ್ತೇವೆ ಎಂದು ವಿನಂತಿಸಿಕೊಂಡು, ಚಾಪ್ಟರ್ 2 ರ ಪ್ರದರ್ಶನ ಮಾಡಿದರು. ಆನಂತರ ಅಭಿಮಾನಿಗಳು ಸಮಾಧಾನಗೊಂಡು ಚಿತ್ರ ವೀಕ್ಷಿಸಿದ್ದಾರೆ.

Comments

Leave a Reply

Your email address will not be published. Required fields are marked *