ಬಿಡುಗಡೆಯಾದ ಐದೇ ದಿನಕ್ಕೆ 100 ಕೋಟಿ ರೂ. ಗಳಿಸಿದ ಕೆಜಿಎಫ್

– ಕನ್ನಡ ಚಿತ್ರರಂಗದಲ್ಲೇ ಮಹತ್ವದ ಮೈಲಿಗಲ್ಲು ನಿರ್ಮಿಸಿದ ರಾಕಿ ಭಾಯ್

ಬೆಂಗಳೂರು: ‘ಕೆಜಿಎಫ್’ ಚಿತ್ರದಿಂದಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಖದರೇ ಬದಲಾಗಿದೆ. ಒಂದು ಕನ್ನಡ ಸಿನಿಮಾ ಐದೇ ದಿನಕ್ಕೆ ನೂರು ಕೋಟಿ ಕಲೆಕ್ಷನ್ ಮಾಡಬಲ್ಲದು ಅನ್ನೋದನ್ನ ಕೆಜಿಎಫ್ ಸಿನಿಮಾ ತೋರಿಸಿಕೊಟ್ಟಿದೆ.

ರಾಕಿ ಭಾಯ್ ಆರ್ಭಟಕ್ಕೆ ಬಾಕ್ಸಾಫೀಸ್ ಉಡೀಸ್ ಆಗಿದೆ. ಇಲ್ಲಿಯವರೆಗೂ ಕನ್ನಡ ಸಿನಿಮಾ ಇಂಡಸ್ಟ್ರಿ ಪಾಲಿಗೆ ನೂರು ಕೋಟಿ ಕ್ಲಬ್ ಲಿಸ್ಟ್ ಅನ್ನುವುದು ಮರೀಚಿಕೆಯಾಗಿತ್ತು. ಆದರೆ ‘ಕೆಜಿಎಫ್’ ಸಿನಿಮಾ ಐದೇ ದಿನಕ್ಕೆ ನೂರು ಕೋಟಿ ಕ್ಲಬ್ ಲಿಸ್ಟ್ ಸೇರಿದ ಕನ್ನಡದ ಮೊದಲ ಚಿತ್ರವಾಗುವುದರ ಮೂಲಕ ಸ್ಯಾಂಡಲ್‍ವುಡ್ ಅನ್ನು ಹೊಸ ದಿಕ್ಕಿಗೆ ಕರೆದುಕೊಂಡು ಹೋಗುತ್ತಿದೆ. ಇದನ್ನೂ ಓದಿ : ವಿಶ್ವಾದ್ಯಂತ ಕೆಜಿಎಫ್ ಚಿತ್ರದ 4 ದಿನದ ಕಲೆಕ್ಷನ್ ಎಷ್ಟು ಗೊತ್ತೆ?

ಕೆಜಿಎಫ್ ರಿಲೀಸ್ ಆದ ಐದೇ ದಿನದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಚಿತ್ರದ ಮೂಲಗಳು ಮಾಹಿತಿ ನೀಡಿವೆ. 4 ದಿನಕ್ಕೆ 77 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿತ್ತು. ಈಗ ಸ್ಕ್ರೀನ್ ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವ ಜೊತೆಗೆ ಕ್ರಿಸ್‍ಮಸ್ ರಜೆ ಇರುವ ಕಾರಣ ಭರ್ಜರಿ ಕಲೆಕ್ಷನ್ ಮಾಡಿದೆ. ಒಟ್ಟಿನಲ್ಲಿ ಕನ್ನಡ ಚಿತ್ರವೊಂದು ಬಾಲಿವುಡ್ ಅಂಗಳದಲ್ಲಿಯೂ ಸದ್ದು ಮಾಡುವ  ಮೂಲಕ ತನ್ನ ಹಿರಿಮೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಇದನ್ನೂ ಓದಿ : ತಮಿಳುನಾಡಲ್ಲೂ ಕೆಜಿಎಫ್ ಹವಾ – ತಮಿಳು ಚಿತ್ರಗಳನ್ನು ಹಿಂದಿಕ್ಕಿ ಸ್ಕ್ರೀನ್ ಹೆಚ್ಚಿಸಿಕೊಳ್ಳುತ್ತಿದ್ದಾನೆ ರಾಕಿ ಭಾಯ್

ರಾಕಿ ಭಾಯ್ ಇಲ್ಲಿಯವರೆಗೆ ಗಳಿಸಿದ್ದೆಷ್ಟು?
* ‘ಕೆಜಿಎಫ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 23 ಕೋಟಿ ರೂ.
* ಎರಡನೇ ದಿನದ ಕೆಜಿಎಫ್ ಟೋಟಲ್ ಕಲೆಕ್ಷನ್ ಸುಮಾರು 40 ಕೋಟಿ ರೂ.
* ಮೂರನೇ ದಿನಕ್ಕೆ ‘ಕೆಜಿಎಫ್’ ಒಟ್ಟಾರೆ ಕಲೆಕ್ಷನ್ 58 ಕೋಟಿ ರೂ.
* ಕೆಜಿಎಫ್ ಚಿತ್ರ ನಾಲ್ಕನೇ ದಿನಕ್ಕೆ ದಾಟಿತ್ತು 77 ಕೋಟಿ ರೂ.
* ಐದನೇ ದಿನ ನೂರು ಕೋಟಿ ರೂ. ಗಡಿ ದಾಟಿದ ಕೆಜಿಎಫ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *