ಕೆಜಿಎಫ್ 2.. ಹುಷಾರ್, ಮಾರ್ಚ್ 21ಕ್ಕೆ ತೂಫಾನ್ ಅಪ್ಪಳಿಸಲಿದೆ!

ಶ್ ನಟನೆಯ ‘ಕೆಜಿಎಫ್ 2’ ಸಿನಿಮಾದ ಮೊದಲ ಹಾಡು ಸದ್ಯದಲ್ಲೇ ಬಿಡುಗಡೆ ಆಗಲಿದೆ. ಇದೇ ಮಾರ್ಚ್ 21 ರಂದು ಬೆಳಗ್ಗೆ 11.07ಕ್ಕೆ ‘ತೂಫಾನ್..’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದೆ. ಇದು ಈ ಸಿನಿಮಾದ ಮೊದಲ ಹಾಡಾಗಿದ್ದು, ತೂಫಾನ್ ಯಾವ ರೀತಿಯಲ್ಲಿಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹುಟ್ಟು ಹಾಕಿದೆ.

ಕೆಜಿಎಫ್ ಸಿನಿಮಾದ ಬಹುತೇಕ ಹಾಡುಗಳು ಹಿಟ್ ಆಗಿದ್ದವು. ನಾನಾ ಬಗೆಯ ಸಂಗೀತವನ್ನು ಸಂಯೋಜಿಸಿ ಹಾಡುಗಳನ್ನು ರೆಡಿ ಮಾಡಿದ್ದರು ರವಿ ಬಸ್ರೂರು. ಈ ಸಿನಿಮಾದಲ್ಲೂ ಅಂಥದ್ದೇ ಮಜಾ ಕೊಡುವಂತೆ ಹಾಡುಗಳು ಇವೆಯಂತೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದೆ. ಹಲವು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿರುವುದರಿಂದ ಅಷ್ಟೂ ಭಾಷೆಗೂ ಸಲ್ಲುವಂತಹ ತಾರಾಗಣವು ಈ ಸಿನಿಮಾದಲ್ಲಿದೆ. ಯಶ್ ನಾಯಕನಾದರೆ, ಶ್ರೀನಿಧಿ ಶೆಟ್ಟಿ ನಾಯಕಿ, ಬಾಲಿವುಡ್ ಖ್ಯಾತ ನಟ ಸಂಜಯ್ ದತ್ತ ಮತ್ತು  ಪ್ರಕಾಶ್ ರೈ,  ಬಾಲಿವುಡ್ ನಟಿ ರವಿನಾ ಟಂಡನ್ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಸಿನಿಮಾದಲ್ಲಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಜೀವ ಬೆದರಿಕೆ ‘ವೈ’ ಶ್ರೇಣಿ ಭದ್ರತೆ

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ವಿಜಯ್ ಕಿರಗಂದೂರು ನಿರ್ಮಾಪಕರು. ಅಲ್ಲದೇ ಕೆಜಿಎಫ್ ಮೊದಲ ಭಾಗ ಮಾಡಿದ್ದ ತಾಂತ್ರಿಕ ವರ್ಗವೇ ಈ ಸಿನಿಮಾದಲ್ಲೂ ಕೆಲಸ ಮಾಡಿದೆ.

Comments

Leave a Reply

Your email address will not be published. Required fields are marked *