ಒಂದೇ ವಾರಕ್ಕೆ 700 ಕೋಟಿ ಬಾಚಿದ `ಕೆಜಿಎಫ್ 2′ ಸಿನಿಮಾ

kgf 2

ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿ ವಿಶ್ವಾದ್ಯಂತ ಸೌಂಡ್ ಮಾಡುತ್ತಿದೆ. ರಾಕಿಭಾಯ್ ಖಡಕ್ ಫರ್ಫಾಮೆನ್ಸ್ಗೆ ಅಭಿಮಾನಿಗಳು ಉಘೇ ಉಘೇ ಅಂತಿದ್ದಾರೆ. ರಿಲೀಸ್ ಆಗಿ ಒಂದು ವಾರ ಆಗಿದ್ರು ಯಶ್ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ರೆಕಾರ್ಡ್ ಬ್ರೇಕ್ ಮಾಡುತ್ತಿದೆ. ಈಗ ವಿಶ್ವಾದ್ಯಂತ ಒಟ್ಟು ಒಂದು ವಾರದಲ್ಲಿ ಬಾಕ್ಸ್ಆಫೀಸ್‌ನಲ್ಲಿ 800 ಕೋಟಿ ಬಾಚಿದೆ.

ಒಂದೊಳ್ಳೆ ಸಿನಿಮಾವನ್ನ ಅಭಿಮಾನಿಗಳು ಎಂದೂ ಕೈ ಬಿಡುವುದಿಲ್ಲ ಅನ್ನೋದಕ್ಕೆ `ಕೆಜಿಎಫ್ 2′ ಸಿನಿಮಾನೇ ಸಾಕ್ಷಿ. ಬಾಕ್ಸ್ಆಫೀಸ್‌ನಲ್ಲಿ `ಕೆಜಿಎಫ್ 2′ ಬಂಗಾರದ ಬೆಳೆ ತೆಗೆದಿದೆ. ರಾಕಿಭಾಯ್ ಚಿತ್ರವನ್ನ ಕೋಟ್ಯಾಂತರ ಜನ ವೀಕ್ಷಿಸಿ ಚಿತ್ರವನ್ನ ಅಪ್ಪಿ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಹಿಂದಿಗೂ ಡಬ್ ಆಗಿದ್ದು, ಹಿಂದಿ ವರ್ಷನ್‌ನಲ್ಲಿ ಏಳು ದಿನಗಳಲ್ಲಿ 250 ಕೋಟಿ ಬಾಚಿದೆ.ಇದನ್ನೂ ಓದಿ: ಮತ್ತೆ ಜೋಡಿಯಾಗಿ ಮಿಂಚಲು ರೆಡಿಯಾದ್ರು ಡಾಲಿ-ಅಮೃತಾ: `ಹೊಯ್ಸಳ’ನಾಗಿ ಡಾಲಿ ಅಬ್ಬರ!

ಅತೀ ವೇಗದಲ್ಲಿ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಹುಬಲಿ 2, ದಂಗಲ್, ಸುಲ್ತಾನ, ಟೈಗರ್ ಜಿಂದಾ ಹೈ, ಚಿತ್ರಗಳು ಮಾಡಿದ ದಾಖಲೆ ಎಲ್ಲಾ ಯಶ್ ಧೂಳಿಪಟ ಮಾಡಿದ್ದಾರೆ. ದೇಶ -ವಿದೇಶದಲ್ಲೂ `ಕೆಜಿಎಫ್ 2′ ಚಿತ್ರ ಟಾಪ್ ಸ್ಥಾನದಲ್ಲಿದೆ. ಒಂದೇ ವಾರದಲ್ಲಿ ಒಟ್ಟು 700 ಕೋಟಿ ಗಳಿಕೆ ಮಾಡಿ, ಯಶ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗೆಲುವಿನ ಜಯಭೇರಿ ಬಾರಿಸಿದೆ.

`ಕೆಜಿಎಫ್ 2′ ಸಿನಿಮಾ ನೋಡುವವರ ಸಂಖ್ಯೆ ಕಮ್ಮಿಯಾಗಿಲ್ಲ. ದಿನದಿಂದ ದಿನಕ್ಕೆ ರಾಕಿಭಾಯ್ ಫೀವರ್ ಜೋರಾಗ್ತಿದೆ. `ಕೆಜಿಎಫ್ 2′ ಖಜಾನೆ ಲೂಟಿ ಮಾಡ್ತಿದೆ. `ಕೆಜಿಎಫ್ ಚಾಪ್ಟರ್ 3′ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

Comments

Leave a Reply

Your email address will not be published. Required fields are marked *