ಗಲ್ಲಾ ಪೆಟ್ಟಿಗೆ ತುಂಬಿಸಿದ ಕೆಜಿಎಫ್ – ಥಿಯೇಟರ್ ಸಂಖ್ಯೆ ಹೆಚ್ಚಿಸಲು ಪ್ಲಾನ್

ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ವರ್ಲ್ಡ್ ವೈಡ್ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಷ್ಟೇ ಅಲ್ಲದೇ ಬಾಕ್ಸ್ ಆಫೀಸ್‍ನಲ್ಲೂ ಧೂಳೆಬ್ಬಿಸುತ್ತಿದೆ.

ಬರೋಬ್ಬರಿ 2000ಕ್ಕೂ ಅಧಿಕ ಸ್ಕ್ರೀನ್‍ಗಳಲ್ಲಿ ಸಿನಿಮಾ ತೆರೆಕಂಡಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ ಕೋಟಿ ಕೋಟಿ ಕೊಳ್ಳೆಹೊಡೆದಿದೆ. ಪಂಚಭಾಷೆಯಲ್ಲಿ ತೆರೆಕಂಡ ಕೆಜಿಎಫ್ ಮೊದಲ ದಿನವೇ 25 ಕೋಟಿ ಗಳಿಕೆ ಕಂಡಿದೆ. ವೀಕೆಂಡ್ ಆದ ಶನಿವಾರ ಸಹ ಹೆಚ್ಚು ಕಡಿಮೆ ಇಷ್ಟೇ ಗಳಿಕೆ ಕಂಡಿದೆ. ಥಿಯೇಟರ್ ಅಖಾಡದಲ್ಲಿ ಕೆಜಿಎಫ್ ಅಬ್ಬರ ನೋಡುತ್ತಿದ್ದರೆ ಇಂದು ಭಾನುವಾರ ಮತ್ತು ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಇನ್ನೂ ಒಂದು ವಾರ ದಾಟುವುದರೊಳಗೆ 100 ಕೋಟಿ ಗಳಿಕೆ ಮಾಡುವ ಎಲ್ಲಾ ನಿರೀಕ್ಷೆಗಳು ಕಂಡು ಬರುತ್ತಿದೆ. ಇದನ್ನೂ ಓದಿ: ಎಫ್‍ಬಿ ಲೈವ್ ಬಂದ ರಾಕಿಂಗ್ ಸ್ಟಾರ್-ಅಭಿಮಾನಿಗಳಿಗೆ ಸಲಹೆ ನೀಡಿದ ರಾಕಿ

ನಟ ಯಶ್ ಕೂಡ ಮೂರು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಕ್ಕ ಖುಷಿಯಲ್ಲಿ ಅಭಿಮಾನಿಗಳ ಜೊತೆ ಕೆಜಿಎಫ್ ಸಕ್ಸಸ್‍ನ್ನು ಹಂಚಿಕೊಂಡಿದ್ದರು. ಫೇಸ್‍ಬುಕ್ ಲೈವ್ ಬಂದು ಕೆಜಿಎಫ್ ಸಕ್ಸಸ್‍ಗೆ ಕಾರಣರಾದ ಪ್ರತಿಯೊಬ್ಬರಿಗೂ ಯಶ್ ಧನ್ಯವಾದ ಅರ್ಪಿಸಿದ್ದರು.

ಖುಷಿ ಸುದ್ದಿ ಅಂದರೆ ಪರಭಾಷೆಗಳಲ್ಲಿ ಯಶ್ ಸಿನಿಮಾಗೆ ಬೇಡಿಕೆ ಹೆಚ್ಚಿದೆ. ತಮಿಳುನಾಡಿನಲ್ಲಿ ಕೆಜಿಎಫ್ ಪ್ರದರ್ಶನದ ಥಿಯೇಟರ್‍ಗಳ ಸಂಖ್ಯೆ ಹೆಚ್ಚು ಮಾಡಲಿಕ್ಕೆ ವಿತರಕರು ಪ್ಲಾನ್ ಮಾಡುತ್ತಿದ್ದಾರೆ. ಬರೀ ತಮಿಳುನಾಡಿನಲ್ಲಿ ಮಾತ್ರ ಅಲ್ಲ, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಇದೇ ಸ್ಥಿತಿ ಇದೆ. ದಿನ ದಿನಕ್ಕೆ ಕೆಜಿಎಫ್ ಕ್ರೇಜ್ ಹೆಚ್ಚಾಗುತ್ತಿದೆ.

ಈ ಹಿಂದೆ ಅನೇಕ ಸ್ಟಾರ್ ಸಿನಿಮಾಗಳು ಅಲ್ಲಿ ಥಿಯೇಟರ್ ಸಿಗದೇ ಒದ್ದಾಡುತ್ತಿದ್ದವು. ನಮಗೆ ಅವರು ಥಿಯೇಟರ್ ಕೊಡಲ್ಲ, ಮತ್ತೆ ನಾವ್ಯಾಕೆ ಕೊಡಬೇಕು ಎಂದು ನಮ್ಮವರು ಕುದಿಯುತ್ತಿದ್ದರು. ಇದೀಗ ಕೆಜಿಎಫ್ ನಮಗೆ ಸಿನಿಮಾ ಕೊಡಿ ಎನ್ನುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *