ಮಾಜಿ ಸಚಿವ ನಾರಾ ಲೋಕೇಶ್ ಭೇಟಿಯಾದ ನಟ ಯಶ್

`ಕೆಜಿಎಫ್ 2′ (Kgf 2) ಸೂಪರ್ ಸಕ್ಸಸ್ ನಂತರ ಯಶ್ (Yash) ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಯಶ್ ಇದೀಗ ಎಲ್ಲೇ ಹೋದರು, ಬಂದರು ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಟ ಯಶ್ ಮಾಜಿ ಸಚಿವ ನಾರಾ ಲೋಕೇಶ್ (Nara Lokesh) ಅವರನ್ನ ಭೇಟಿಯಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

`ಕೆಜಿಎಫ್ 2′ ಸಿನಿಮಾ ಬಂದು 7 ತಿಂಗಳು ಕಳೆದರು ಕೂಡ ಯಶ್ ಸೈಲೆಂಟ್ ಆಗಿರೋದು, ಮುಂದಿನ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್‌ ಸಿಗದೇ ಇರೋದು ನೆಟ್ಟಿಗರಿಗೆ ಕುತೂಹಲ ಮೂಡಿಸಿದೆ. ಅವರ ಮುಂದಿನ ನಡೆಯ ಬಗ್ಗೆ ಫ್ಯಾನ್ಸ್ ಮತ್ತಷ್ಟು ಕ್ಯೂರಿಯಸ್ ಆಗಿದ್ದಾರೆ. ಈಗ ಆಂಧ್ರ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅವರ ಪುತ್ರ ಮಾಜಿ ಸಚಿವ ನಾರಾ ಲೋಕೇಶ್ ಅವರನ್ನ ಯಶ್ ಭೇಟಿಯಾಗಿರೋದು ರಾಜಕೀಯ ರಂಗ ಮತ್ತು ಸಿನಿಮಾರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಇದನ್ನೂ ಓದಿ: IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್‌ 3 ಚಿತ್ರಗಳು

ಹೈದರಾಬಾದ್‌ಗೆ ಯಶ್ ಭೇಟಿ ನೀಡಿದ್ದು, ಹೋಟೆಲ್‌ವೊಂದರಲ್ಲಿ ಕೆಲ ಸಮಯ ಇಬ್ಬರು ಮಾತುಕತೆ ನಡೆಸಿದ್ದಾರೆ. ನಾರಾ ಲೋಕೇಶ್‌ ಜೊತೆಗಿನ ಯಶ್‌ ಭೇಟಿಗೆ ಕಾರಣ ಏನು? ಯಾವ ವಿಚಾರಗಳನ್ನ ಮಾತನಾಡಿದ್ದರು ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

Live Tv
[brid partner=56869869 player=32851 video=960834 autoplay=true]