ಕೆಜಿಎಫ್-2 ಬುಕಿಂಗ್ ಯಾವಾಗ ಪ್ರಾರಂಭ?

KGF 2 Yash (4)

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಭಾರತದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್-2’ ರಿಲೀಸ್‌ಗೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ. ನೆಚ್ಚಿನ ನಟನ ಸಿನಿಮಾ ಸ್ವಾಗತಿಸಲು ರಾಕಿಭಾಯ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾಗೆ ಇನ್ನೂ ಒಂದೇ ವಾರವಿದ್ದು, ಬುಕಿಂಗ್ ಯಾವಾಗ ಎಂದು ಇಡೀ ಸಿನಿರಂಗ ಕಾಯುತ್ತಿದೆ.

‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೆ ಇನ್ನು ಏಳು ದಿನಗಳಷ್ಟೆ ಬಾಕಿ ಇದ್ದು, ಸಿನಿಮಾದ ಟಿಕೆಟ್ ಬುಕಿಂಗ್ ಕೆಲವು ರಾಜ್ಯಗಳಲ್ಲಿ ಈಗಾಗಲೇ ಓಪನ್ ಆಗಿದೆ. ಏಪ್ರಿಲ್ 07 ರಿಂದಲೇ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ‘ಕೆಜಿಎಫ್ 2’ ಟಿಕೆಟ್ ಬುಕಿಂಗ್ ತೆರೆಯಲಾಗಿದೆ. ಅಮೆರಿಕ ಸೇರಿದಂತೆ ಇತರೆ ಕೆಲವು ದೇಶಗಳಲ್ಲಿಯೂ ಟಿಕೆಟ್ ಬುಕಿಂಗ್ ನಾಳೆಯಿಂದಲೇ ಓಪನಿಂಗ್ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಯಾವಾಗ ಎಂಬುದಕ್ಕೆ ಚಿತ್ರತಂಡ ಉತ್ತರ ಕೊಟ್ಟಿದೆ. ಇದನ್ನೂ ಓದಿ:  ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್ 

ಚಿತ್ರತಂಡ ಹೇಳಿದ್ದೇನು?
‘ಕೆಜಿಎಫ್ 2’ ಸಿನಿಮಾದ ಟಿಕೆಟ್ ಬುಕಿಂಗ್ ಕರ್ನಾಟಕದಲ್ಲಿ ಏಪ್ರಿಲ್ 10 ರಿಂದ ಪ್ರಾರಂಭಗೊಳ್ಳಲಿದೆ. ಮೂವೀ ರಿಲೀಸ್‌ಗೂ ಮೂರು ದಿನದ ಮುನ್ನವೇ ಸಿನಿಮಾ ಟಿಕೆಟ್ ಬುಕ್ ಮಾಡಬಹುದು.

‘ಕೆಜಿಎಫ್ 2’ ಸಿನಿಮಾ ವಿಶ್ವದಾದ್ಯಂತ ಸುಮಾರು 6,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಗ್ರೀಸ್ ಸೇರಿದಂತೆ ವಿವಿಧ ದೇಶಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

Comments

Leave a Reply

Your email address will not be published. Required fields are marked *