ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ನಿಲ್ಲದ ರಾಕಿಭಾಯ್ ಆರ್ಭಟ: 400 ಕೋಟಿಯತ್ತ `ಕೆಜಿಎಫ್ 2′

ನ್ನಡ ಚಿತ್ರರಂಗದ ಹೆಮ್ಮೆ `ಕೆಜಿಎಫ್ 2′ ವಿಶ್ವದಾದ್ಯಂತ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ರಾಕಿಭಾಯ್ ಆರ್ಭಟಕ್ಕೆ ಬಾಲಿವುಡ್ ಚಿತ್ರಗಳು ದೂಳಿಪಟ ಆಗುತ್ತಿದೆ. ಇನ್ನು ಹಿಂದಿ ಬಾಕ್ಸಾಫೀಸ್‌ನಲ್ಲಿ 360.31 ಗಳಿಕೆ ಮಾಡಿ, 400 ಕೋಟಿ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ.

ಬಾಲಿವುಡ್ ಮಂದಿಗೆ `ಕೆಜಿಎಫ್ ಚಾಪ್ಟರ್ 2′ ಸಕ್ಸಸ್ ಅನ್ನೋದು ಅಕ್ಷರಶಃ ದುಸ್ವಪ್ನವಾಗಿ ಕಾಡುತ್ತಿದೆ. ಯಶ್ ಸಿನಿಮಾ ರಿಲೀಸ್ ಆಗಿ ಮೂರು ವಾರವಾಗಿದ್ದರು ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದೆ ಹೊರತು ಕಮ್ಮಿಯಾಗ್ತಿಲ್ಲ. ಈಗಾಗಲೇ ಚಿತ್ರದ ಒಟ್ಟು ಕಲೆಕ್ಷನ್ 1000 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಇನ್ನು ಹಿಂದಿ ಬಾಕ್ಸ್ಆಫೀಸ್‌ನಲ್ಲಿ ಇದೀಗ 360.31 ಕೋಟಿ ಗಳಿಕೆ ಮಾಡಿ 400 ಕೋಟಿ ಲೂಟಿ ಮಾಡುತ್ತ ಲಗ್ಗೆ ಇಡುತ್ತಿದೆ.

ಪ್ರಶಾಂತ್ ನೀಲ್ ಮತ್ತು ಯಶ್ ಮಾಡಿರುವ ಮೋಡಿ ಎಂತಹದ್ದು ಎಂಬುದಕ್ಕೆ ಚಿತ್ರದ ಕಲೆಕ್ಷನ್ ಲೆಕ್ಕವೇ ಸಾಕ್ಷಿ. ಹಿಂದಿ ಮತ್ತು ಟಾಲಿವುಡ್ ಬಿಗ್ ಬಜೆಟ್ ಚಿತ್ರಗಳು ಮಾಡಿರುವ ಎಲ್ಲಾ ರೆಕಾರ್ಡ್‌ `ಕೆಜಿಎಫ್ 2′ ಬ್ರೇಕ್ ಮಾಡಿದೆ. ಚಿತ್ರದ ಸದ್ಯ ಕಲೆಕ್ಷನ್ 360.31 ಗಲ್ಲಾಪೆಟ್ಟಿಗೆಯಲ್ಲಿ ಬಾಚಿದ್ದು, ಮೇ 2 ಈದ ಹಬ್ಬದಂದು 400 ಕೋಟಿ ಕಲೆಕ್ಷನ್ ಮಾಡೋದು ಪಕ್ಕಾ ಅಂತಿದ್ದಾರೆ ಬಾಲಿವುಡ್ ಸಿನಿ ಪಂಡಿತರು.

ರಾಕಿಭಾಯ್ ಘರ್ಜನೆಯಿಂದ ಮಂಕಾಗಿರೋ ಬಾಲಿವುಡ್‌ಗೆ `ಕೆಜಿಎಫ್ 2′ ಯೋಚನೆಯಾಗಿದೆ. ಹಿಂದಿಯಲ್ಲಿ ಮುಂಬರುವ ಚಿತ್ರಗಳಾದರು ʻಕೆಜಿಎಫ್ 2ʼ ಮುಂದೆ ಸಡ್ಡು ಹೊಡೆದು ನಿಲ್ಲುತ್ತಾ ಅಂತಾ ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *