ಚೀನಾಗೆ ಸೆಡ್ಡು ಹೊಡೆದ ಯಶ್ ಫ್ಯಾನ್ಸ್- ಮಾಲೂರಿನಲ್ಲಿ ಮೊಸಾಯಿಕ್ ಆರ್ಟ್ ದಾಖಲೆ

ನ್ನಡ ಚಿತ್ರರಂಗದ ಹೆಮ್ಮೆಯ ನಟನಾಗಿ ಯಶ್ ಬೆಳೆದು ನಿಂತಿದ್ದಾರೆ. ನ್ಯಾಷನಲ್ ಲೆವೆಲ್‌ನಲ್ಲಿ ಯಶ್ ಮಿಂಚ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ ಚಾಪ್ಟರ್ 2′ ರಿಲೀಸ್ ಹಿನ್ನೆಲೆಯಲ್ಲಿ ಯಶ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಶುಭಾಶಯ ತಿಳಿಸಿ ಅಚ್ಚರಿ ಮೂಡಿಸಿದ್ದಾರೆ. ಕೋಲಾರ ಜಿಲ್ಲೆ ಮಾಲೂರಿನ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಮೊಸಾಯಿಕ್ ಬುಕ್ ಪೋಟ್ರಿಯಟ್ ಮಾಡಿ ಇಂಡಿಯಾ ರೆಕಾರ್ಡ್ಗೆ ಮುಂದಾಗಿದ್ದಾರೆ.

ಯಶ್ ಮೇಲಿನ ಅಭಿಮಾನಕ್ಕಾಗಿ 25 ಸಾವಿರ ಚದರಡಿಯಲ್ಲಿ 25 ಸಾವಿರ ಬಣ್ಣ ಬಣ್ಣದ ಪುಸ್ತಕಗಳನ್ನ ಬಳಸಿಕೊಂಡು ವಿಶ್ವದಲ್ಲೇ ಅತಿ ದೊಡ್ಡ ಮೊಸಾಯಿಕ್ ಬುಕ್ ಫೋಟೋ ಮಾಡಿದ್ದಾರೆ. ಮಾಲೂರು ಪಟ್ಟಣದ ವೈಟ್ ಗಾರ್ಡನ್ ಗ್ರೌಂಡ್‌ನಲ್ಲಿ ಕಳೆದ ಒಂದು ವಾರದಿಂದ ಸಕಲ ರೀತಿಯ ಸಿದ್ಧತೆಗಳನ್ನ ಮಾಲೂರು ಯಶ್ ಅಭಿಮಾನಿಗಳು ಮಾಡಿಕೊಂಡಿದ್ದರು. ಇದೀಗ ಮೊಸಾಯಿಕ್ ಬುಕ್ ಆರ್ಟ್ ಮಾಡಿ ತಮ್ಮ ನೆಚ್ಚಿನ ನಟನ ಭಾವಚಿತ್ರವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಿನ್ನ ಶೈಲಿಯಲ್ಲಿ ಮೊಸಾಯಿಕ್ ಆರ್ಟ್ ಮಾಡಲು 30ಕ್ಕೂ ಹೆಚ್ಚು ಯಶ್ ಅಭಿಮಾನಿಗಳು ಹಗಲು ರಾತ್ರಿಯೆನ್ನದೆ ದುಡಿದಿದ್ದಾರೆ. ಮೂರು ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಿದ್ದಾರೆ. ಈ ಹಿಂದೆ ಚೈನಾ 25 ಸಾವಿರ ಪುಸ್ತಕಗಳನ್ನ ಬಳಸಿಕೊಂಡು ವಿಶ್ವ ದಾಖಲೆ ಮೊಸಾಯಿಕ್ ಆರ್ಟ್ ಮಾಡಿತ್ತು, ಅದರಂತೆ 25 ಸಾವಿರ ನೋಟ್ ಬುಕ್ ಬಳಿಸಿಕೊಂಡು ಯಶ್ ಭಾವಚಿತ್ರ ಮಾಡಿ ಹೊಸ ಹಾಗೂ ವಿನೂತನ ಪ್ರಯತ್ನ ಮಾಡುವ ಮೂಲಕ ಯಶ್ ಫ್ಯಾನ್ಸ್ ಚೈನಾಗೆ ಸೆಡ್ಡು ಹೊಡೆದಿದ್ದಾರೆ. ಇದನ್ನು ಓದಿ:ಅಪ್ಪು ಮನೆಗೆ ಭೇಟಿ ಕೊಟ್ಟ ಟಾಲಿವುಡ್ ಕಾಮಿಡಿ ಸ್ಟಾರ್ ಬ್ರಹ್ಮಾನಂದಂ, ಅಲಿ

ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಈ ಮೂಲಕ ಯಶ್ ಅವರ `ಕೆಜಿಎಫ್-2′ ಸಿನಿಮಾ ಯಶಸ್ವಿಯಾಗಲೆಂದು ಅವರ ಅಭಿಮಾನಿಗಳು ಶುಭ ಕೋರಿದ್ದಾರೆ. ಇನ್ನೂ ಇದೆಲ್ಲಾ ಯಶ್ ಅಭಿಮಾನಿಗಳು ಹಾಗೂ ಮಾಲೂರಿನ ಸಮಾಜ ಸೇವಕ ಹೂಡಿ ವಿಜಯ್ ಕುಮಾರ್ ನೇತೃತ್ವದಲ್ಲಿ ಮಾಡಲಾಗಿದೆ. ಎಲ್‌ಇಡಿ ಸ್ಕ್ರೀನ್‌ಗಳನ್ನು ಬಳಸಿಕೊಂಡು ಡ್ರೋನ್ ಮೂಲಕ ಯಶ್ ಭಾವಚಿತ್ರವನ್ನ ಸೆರೆ ಹಿಡಿದು ತೋರಿಸಲಾಗುತ್ತದೆ.

Comments

Leave a Reply

Your email address will not be published. Required fields are marked *