ಕೆಜಿಎಫ್-2 ಬಾಲಿವುಡ್ ಮೇಲೆ ಹಾಕಿದ ಅಣುಬಾಂಬ್ : ರಾಮ್ ಗೋಪಾಲ್ ವರ್ಮಾ

ನೇಕ ಹಿಟ್ ಚಿತ್ರಗಳನ್ನು ಕೊಟ್ಟಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿನ್ನೆಯಿಂದ ಕೆಜಿಎಫ್ 2 ಚಿತ್ರದ ಬಗ್ಗೆ ಸಾಲು ಸಾಲು ಟ್ವಿಟ್ ಗಳನ್ನು ಮಾಡುತ್ತಿದ್ದಾರೆ. ಸಿನಿಮಾ, ಕಲಾವಿದರು, ತಂತ್ರಜ್ಞರು ಮತ್ತು ನಿರ್ದೇಶಕರ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾ ರಿಲೀಸ್ ಆದಾಗ ತಮ್ಮ ಡೇಂಜರ್ಸ್ ಸಿನಿಮಾ ಹೋಲಿಸಿ ಲೇವಡಿ ಮಾಡಿದ್ದ ರಾಮ್ ಗೋಪಾಲ್ ವರ್ಮಾ, ಕೆಜಿಎಫ್ 2 ಸಿನಿಮಾದ ಮೇಲೆ ಎಲ್ಲಿಲ್ಲದ ಪ್ರೀತಿ ತೋರಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಡಿಜಾಸ್ಟರ್ ಸಿನಿಮಾ ಎಂದು ‘ಥೂ… ಥೂ..’ ಉಗಿಸಿಕೊಂಡ ಬಾಲಿವುಡ್ ನಟ

ಕೆಜಿಎಫ್ 2 ವಿಶ್ವದಾದ್ಯಂತ ಗೆದ್ದಿದೆ. ಬಾಕ್ಸ್ ಆಫೀಸ್ ತುಂಬಿಸಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಕನ್ನಡಿಗರಂತೂ ಚಿತ್ರವನ್ನು ಎದೆ ಮೇಲೆ ಇಟ್ಟುಕೊಂಡು ಆರಾಧಿಸುತ್ತಿದ್ದಾರೆ. ಹಾಗೆಯೇ ವರ್ಮಾ ಒಬ್ಬ ಸಾಮಾನ್ಯ ನೋಡುಗನಾಗಿ ಸಿನಿಮಾ ವೀಕ್ಷಿಸಿ, ಚಿತ್ರದ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ

ಸ್ಟಾರ್ ನಟರ ಮೇಲೆ ದುಡ್ಡು ಸುರಿಯುವುದಕ್ಕಿಂತ ಸಿನಿಮಾದ ಮೇಲೆ ದುಡ್ಡು ಸುರಿದರೆ ‘ಕೆಜಿಎಫ್ 2’ನಂತಹ ಚಿತ್ರವಾಗುತ್ತದೆ ಎಂದು ಪರೋಕ್ಷವಾಗಿ ಸ್ಟಾರ್ ನಟರ ಮೇಲೆ ದುಡ್ಡು ಹಾಕುವವರಿಗೆ ಟಾಂಗ್ ಕೊಟ್ಟಿದ್ದಾರೆ ವರ್ಮಾ. ಕೆಜಿಎಫ್ ಸಿನಿಮಾದ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡದ ಬಾವುಟವನ್ನು ಜಗತ್ತಿನ ತುತ್ತತುದಿಯವರೆಗೂ ತಗೆದುಕೊಂಡು ಹೋಗಿದ್ದಾರೆ ಎಂದೂ ಟ್ವೀಟ್ ಮಾಡಿದ್ದಾರೆ. ಜಗತ್ತಿನ ನಕಾಶೆಯನ್ನು ಬದಲಿಸಿದ ನಿರ್ದೇಶಕ ಎಂದು ಕೊಂಡಾಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 : ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್? ಪಕ್ಕಾ ಲೆಕ್ಕ

ಸಿನಿಮಾದ ಒಂದೊಂದು ದೃಶ್ಯವನ್ನೂ ಹೋಲಿಸಿ ಕಾಮೆಂಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ವಿಲನ್ ಗಳನ್ನು ಹುಡುಕಿಕೊಂಡು‌ ಮಷಿನ್ ಗನ್ ನೊಂದಿಗೆ ಮುಂಬೈಗೆ ಹೊರಡುವ ರಾಕಿಭಾಯ್ ರೀತಿಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ಬಾಲಿವುಡ್ ಮೇಲೆ ಅಣುಬಾಂಬ್ ಸಿಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *