ಬ್ಯಾಟರಾಯನಪುರದಲ್ಲಿ ಕೇಸರಿ ಫೌಂಡೇಶನ್‌ ವತಿಯಿಂದ ಆಷಾಢ ಅಷ್ಟಲಕ್ಷ್ಮಿ ಪೂಜೆ

ಬೆಂಗಳೂರು: ಕೇಸರಿ ಫೌಂಡೇಷನ್‌ನ ಸಂಸ್ಥಾಪಕರಾದ ತಮ್ಮೇಶ್ ಗೌಡರ ನೇತೃತ್ವದಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸುಮಾರು 50 ದೇವಾಲಯಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಏಕಕಾಲದಲ್ಲಿ ಆಷಾಢ ಅಷ್ಟಲಕ್ಷ್ಮಿ ಪೂಜೆ ಮೊದಲ ಆಷಾಢ ಶುಕ್ರವಾರವಾದ ಜುಲೈ 1ರಂದು ಅತ್ಯಂತ ವೈಭವದಿಂದ ನಡೆಯಿತು.  ಈ ಪೂಜೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

ಇದೇ ವೇಳೆ ತಮ್ಮೇಶ್‌ ಗೌಡ ಮಾತನಾಡುತ್ತಾ, ಒಂದು ಮನೆಗೆ ಶಕ್ತಿ ಅಂದರೆ ಆ ವಾನೆಯ ಮಹಿಳೆ, ಈ ಮಹಿಳೆಯಿಂದ ಲಕ್ಷ್ಮಿ ಪೂಜೆ ಮಾಡಿಸುವುದರಿಂದ ಆ ಮನೆಗೆ ಲಕ್ಷ್ಮೀ ಬರುತ್ತದೆ ಹಾಗೂ ಸುಖ-ನೆಮ್ಮದಿ ಬೆರೆಯುತ್ತದೆ ಎಂಬ ನಂಬಿಕೆಯಿಂದ ಈ ಪೂಜೆಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಯುವ ಸಾಹಿತ್ಯ ರತ್ನ ಪ್ರಶಸ್ತಿಗೆ ಶರಣು ಹುಲ್ಲೂರು ಆಯ್ಕೆ

ಕಳೆದ ವರ್ಷವೂ ಸಹ ಆಷಾಢ ಅಷ್ಟಲಕ್ಷ್ಮಿ ಪೂಜೆ ಹಾಗೂ ದುರ್ಗಾಷ್ಟಮಿಯ ದಿನ ದುರ್ಗಾಪೂಜೆಯನ್ನು ವಾಹಿಳೆಯರ ನೇತೃತ್ವದಲ್ಲಿ ಮಾಡಿದ್ದೆವು. ಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು. ಅದೇ ರೀತಿ ಈ ಬಾರಿಯು ಸಹ ಆಷಾಢ ಅಷ್ಟಲಕ್ಷ್ಮಿ ಪೂಜೆಯನ್ನು ಇಂದು ಯಶಸ್ವಿಯಾಗಿ ನೆರವೇರಿಸಿದೆವು ಹಾಗೂ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೂ ಎರಡು ಮಣ್ಣಿನ ದೀಪಗಳು, ಬಸ್ಸಿ, ಆಂಶಿನ, ಕುಂಕುಮ, ಬಳೆ, ಕನ್ನಡ ಬಟ್ಟೆ, ಬಾಳೆಹಣ್ಣು, ತೆಂಗಿನಕಾಯಿ ಸೇರಿ ಬಾಗಿನ ಮತ್ತು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ತಾಯಿ ಪ್ರಸಾದ ನೀಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ಮಾಡಿಸಿ ಪ್ರಸಾದ ನೀಡಲಾಯಿತು ಎಂದರು.

Live Tv

Comments

Leave a Reply

Your email address will not be published. Required fields are marked *