ಮತ್ತೆ ತನ್ನ ಹಳೆ ಚಾಳಿಯನ್ನ ಮುಂದುವರಿಸಿದ ಕೇರಳ!

ಮೈಸೂರು: ಕೇರಳದ ಕಸವನ್ನು ಮೈಸೂರಿನ ಗಡಿ ತಾಲೂಕುಗಳ ಗ್ರಾಮಗಳಲ್ಲಿ ಬಂದು ಸುರಿಯುವ ಕೆಲಸವನ್ನು ಕೇರಳಿಗರು ಮತ್ತೆ ಆರಂಭಿಸಿಕೊಂಡಿದ್ದಾರೆ.

ಮೈಸೂರಿನ ಎಚ್.ಡಿ. ಕೋಟೆಯ ಗಡಿ ಗ್ರಾಮಗಳಲ್ಲಿ ಕೇರಳದಿಂದ ರಾತ್ರೋರಾತ್ರಿ ಲಾರಿಗಟ್ಟಲೆ ಕಸದ ರಾಶಿ ತಂದು ಸುರಿಯಲಾಗುತ್ತಿತ್ತು. ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ ನಂತರ ಈ ಭಾಗದಲ್ಲಿ ಕಸ ಸುರಿಯುವುದು ತಪ್ಪಿದೆ. ಈಗ ಇನ್ನೊಂದು ಗಡಿ ತಾಲೂಕಾದ ಟಿ. ನರಸೀಪುರದಲ್ಲಿ ಈ ಸಮಸ್ಯೆ ಶುರುವಾಗಿದೆ.

ಟಿ. ನರಸೀಪುರದ ಕಗ್ಗಲಿಪುರ ಗ್ರಾಮದ ಹೊರವಲಯದಲ್ಲಿ ಕೇರಳದಿಂದ ಕಸ ತಂದು ಸುರಿಯಲಾಗುತ್ತಿದೆ. ರಾತ್ರೋರಾತ್ರಿ ಕೇರಳದಿಂದ ಕಸ ತಂದು ಸುರಿಯುತ್ತಿರುವುದನ್ನು ಗ್ರಾಮಸ್ಥರೇ ರೆಡ್ ಹ್ಯಾಂಡ್ ಆಗಿ ಹಿಡಿದು ವಿಡಿಯೋ ಮಾಡಿದ್ದಾರೆ. ಕಗ್ಗಲೀಪುರದ ಕೆರೆ ಪಕ್ಕದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಹಾಗೂ ಮೆಡಿಸನ್‍ನ ತ್ಯಾಜ್ಯ ಸುರಿಯಲಾಗಿದೆ.

Comments

Leave a Reply

Your email address will not be published. Required fields are marked *