ಹೃದಯಾಘಾತದಿಂದ ಸಂಸದ ಇ.ಅಹ್ಮದ್ ನಿಧನ- ಬಜೆಟ್ ಮುಂದೂಡುವ ಸಾಧ್ಯತೆ

ನವದೆಹಲಿ: ಕೇರಳದ ಕಣ್ಣೂರು ಸಂಸದ ಇ.ಅಹ್ಮದ್ ನಿಧನರಾಗಿದ್ದು, ಬಜೆಟ್ ಅಧಿವೇಶನದ ಮೇಲೆ ಸೂತಕದ ನೆರಳು ಆವರಿಸಿದೆ.

ಮಂಗಳವಾರದಂದು ಸಂಸತ್ ಅಧಿವೇಶನದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಅಹ್ಮದ್ ಅವ್ರನ್ನ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಂಸದ ಅಹ್ಮದ್ ಕೊನೆಯುಸಿರೆಳೆದಿದ್ದಾರೆ. ಅಹ್ಮದ್ ಸಾವಿನ ಸುದ್ದಿ ಕೇಳಿ ತಡರಾತ್ರಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿ ಅನೇಕರು ಆಸ್ಪತ್ರೆಗೆ ಭೇಟಿ ನೀಡಿದ್ರು.

ಅಹ್ಮದ್ ಅಕಾಲಿಕ ಸಾವಿನಿಂದ ಇವತ್ತಿನ ಬಜೆಟ್ ಅಧಿವೇಶನವನ್ನ ಕೆಲವು ಗಂಟೆಗಳ ಕಾಲ ಮುಂದೂಡ್ತಾರಾ? ಇಲ್ಲಾಂದ್ರೆ ಸಂತಾಪ ಸೂಚಿಸಿ ಸಮಯಕ್ಕೆ ಸರಿಯಾಗಿ ಬಜೆಟ್ ಮಂಡಿಸ್ತಾರ ಅನ್ನೋ ಪ್ರಶ್ನೆ ಶುರುವಾಗಿದೆ.

ಅಹ್ಮದ್ ಅವರಿಗೆ 78 ವರ್ಷ ವಯಸ್ಸಾಗಿತ್ತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದಿಂದ ಸಂಸದರಾಗಿ ಆಯ್ಕೆ ಆಗಿದ್ರು. ಕೇಂದ್ರ ವಿದೇಶಾಂಗ ಸಚಿವರಾಗಿ ರಾಜ್ಯ ರೈಲ್ವೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ರು.

Comments

Leave a Reply

Your email address will not be published. Required fields are marked *