ಕೇರಳ ಸಿಎಂ ಕಾರ್ಯಕ್ರಮದಲ್ಲಿ ಹಿಜಬ್‌ ಧರಿಸಿ ಪ್ರಾರ್ಥನಾ ಗೀತೆ ಹಾಡಿದ ವಿದ್ಯಾರ್ಥಿನಿಯರು

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರಿದ್ದ ಕಾರ್ಯಕ್ರಮವೊಂದರಲ್ಲಿ ಹಿಜಬ್‌ಧಾರಿ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹಿಜಬ್‌ ಧರಿಸಿ ವೇದಿಕೆ ಮೇಲೆ ಪ್ರಾರ್ಥನಾ ಗೀತೆ ಹಾಡುತ್ತಿರುವ ವಿದ್ಯಾರ್ಥಿನಿಯ ಫೋಟೋವನ್ನು ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡಿದ್ದಾರೆ. ಫೋಟೋ ಜೊತೆಗೆ ʼಕೇರಳ, ನಮ್ಮ ಹೆಮ್ಮೆʼ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು

ತಿರುವನಂತಪುರಂನಲ್ಲಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರು ಪಾಲ್ಗೊಂಡಿದ್ದರು. ಅವರೊಟ್ಟಿಗೆ ಮೂವರು ಸಚಿವರು ಸಹ ಉಪಸ್ಥಿತರಿದ್ದರು.

ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸಿಸ್ಟ್‌) ಕೂಡ ಫೋಟೋವನ್ನು ಶೇರ್‌ ಮಾಡಿದ್ದು, ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರು 53 ಹೊಸ ಹೈಟೆಕ್‌ ಶಾಲಾ ಕಟ್ಟಡಗಳನ್ನು ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿನಿಯರು ಜಾತ್ಯತೀತ ಆಶಯದ ಸ್ವಾಗತ ಗೀತೆಯನ್ನು ಹಾಡಿದ್ದಾರೆ. ಇದು ಪ್ರೀತಿಯ ಮನೆ. ವಿದ್ಯಾರ್ಥಿನಿಯರು ಶಾಲಾ ಸಮವಸ್ತ್ರದೊಂದಿಗೆ ಶಿರಸ್ತ್ರಾಣ (ಹಿಜಬ್‌) ಧರಿಸಿ ಹಾಡಿದ್ದಾರೆ. ಇದು ಸಾರ್ವಜನಿಕ ಸುವ್ಯವಸ್ಥೆಗೆ ಸಮಸ್ಯೆಯಲ್ಲ. ಶಿಕ್ಷಣ ಮೂಲಭೂತ ಹಕ್ಕು ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಬ್ ಅಲ್ಲ : ಬಿಸ್ವಾ ಶರ್ಮಾ

ಕರ್ನಾಟಕದಲ್ಲಿ ತಲೆದೋರಿರುವ ಹಿಜಬ್‌ ವಿವಾದವನ್ನು ಕೇರಳ ಸಿಎಂ ಪಿಣರಾಯ್‌ ವಿಜಯನ್‌ ಅವರು ಖಂಡಿಸಿದ್ದರು. ಇದು ನಮ್ಮ ದೇಶಕ್ಕೆ ಕೋಮುವಾದ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತದೆ. ಶಿಕ್ಷಣ ಸಂಸ್ಥೆಗಳು ಜಾತ್ಯತೀತತೆಯನ್ನು ಪೋಷಿಸುವ ತಾಣಗಳಾಗಬೇಕು. ಬದಲಾಗಿ ಚಿಕ್ಕ ಮಕ್ಕಳಲ್ಲಿ ಕೋಮು ವಿಷವನ್ನು ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ ಎಂದು ಟೀಕಿಸಿದ್ದರು.

Comments

Leave a Reply

Your email address will not be published. Required fields are marked *