ಧಗ, ಧಗ ಹೊತ್ತಿ ಉರಿದ ಲಾರಿ- ಪ್ರಾಣ ಪಣಕ್ಕಿಟ್ಟು ಮೈದಾನಕ್ಕೆ ಚಲಾಯಿಸಿದ

ತಿರುವನಂತಪುರಂ: ಲಾರಿಗೆ ಬೆಂಕಿ ಹೊತ್ತಿ ರಸ್ತೆ ಮಧ್ಯದಲ್ಲಿಯೇ ಧಗಧಗ ಹೊತ್ತಿ ಉರಿದಿದೆ. ಅಲ್ಲೇ ಇರುವ ಸ್ಥಳೀಯ ಲಾರಿಯನ್ನು ಸೇಫ್ ಜಾಗಕ್ಕೆ ತಂದು ದೊಡ್ಡ ಮಟ್ಟದಲ್ಲಿ ಆಗ ಬಹುದಾದ ಅಪಾಯವನ್ನು ತಡೆದಿದ್ದಾನೆ. ಈ ಘಟನೆ ಕೆರಳದ ಕೊಡಂಚೇರಿ ಪಟ್ಟಣದಲ್ಲಿ ನಡೆದಿದೆ.

ಭತ್ತದ ಹುಲ್ಲು ತುಂಬಿದ್ದ ಲಾರಿಗೆ ವಿದ್ಯುತ್ ತಂತಿಗೆ ತಾಗಿ ಬೆಂಕಿ ಹೊತ್ತಿಕೊಂಡಿದೆ. ಲಾರಿಯ ಚಾಲಕ ತನ್ನ ವಾಹನ ಬೆಂಕಿಯಲ್ಲಿ ನಾಶವಾಗುವುದು ಖಚಿತ ಎಂದು ಅಸಾಹಯಕ ಸ್ಥಿತಿಯಲ್ಲಿ ನಿಂತನು. ಆದರೆ ಒಬ್ಬ ವ್ಯಕ್ತಿ ಲಾರಿಯನ್ನು ಉಳಿಸಿ ದೊಡ್ಡ ದುರಂತವನ್ನು ತಪ್ಪಿಸಲು ಮುಂದಾಗಿದ್ದಾನೆ. ಇದನ್ನೂ ಓದಿ:  ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

ಲಾರಿ ಚಾಲಕ ತನ್ನ ವಾಹನದಿಂದ ಜಿಗಿದು ಬೆಂಕಿಯನ್ನು ನಂದಿಸಲು ವಿಫಲನಾದನು. ಆದರೆ ಅದೇ ಪಟ್ಟಣದ ಶಾಜಿ ಪಪ್ಪನ್ ಎನ್ನುವ ವ್ಯಕ್ತಿ ಹೊತ್ತಿ ಉರಿಯುತ್ತಿರುವ ಲಾರಿಯನ್ನು ಖಾಲಿ ಆಟದ ಮೈದಾನಕ್ಕೆ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬರೀ ಎರಡೇ ಅಲ್ಲ, ಮೂರು ಗುಂಪುಗಳಿವೆ: ಕಾರಜೋಳ

ಲಾರಿಯನ್ನು ನಿರ್ಜನ ಪ್ರದೇಶಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ. ವಾಹನವು ಸುಟ್ಟುಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿ ಪರಿಸ್ಥಿತಿಯನ್ನು  ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *