ಚಿಕ್ಕಮಗಳೂರು: ಕೇರಳದಿಂದ ಪ್ರವಾಸಕ್ಕೆ ಬಂದಿದ್ದ ಎಂಜಿನಿಯರ್ ನಾಪತ್ತೆಯಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಾಗಲಾಪುರದಲ್ಲಿ ನಡೆದಿದೆ.
ಕೇರಳದ ಕ್ಯಾಲಿಕಟ್‍ನ ಖಾಸಗಿ ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಬಂದಿದ್ದರು. ಸದ್ಯ ಕೊಪ್ಪ ತಾಲೂಕಿನ ನಾಗಲಾಪುರ ಗ್ರಾಮದ ಬಳಿ ತುಂಗಾ ಸೇತುವೆ ಮೇಲೆ ಸಂದೀಪ್ ಬೈಕ್ ಪತ್ತೆಯಾಗಿದೆ.

ಬೈಕಿನಲ್ಲಿದ್ದ ಬ್ಯಾಗ್‍ಗಳನ್ನ ಚೆಕ್ ಮಾಡಿದಾಗ ಅದರಲ್ಲಿದ್ದ ಐಡಿ ಕಾರ್ಡ್‍ನಿಂದ ಸಂದೀಪ್ ಬಗ್ಗೆ ಮಾಹಿತಿ ದೊರೆತಿದೆ. ನದಿ ದಡದ ದಂಡೆಯ ಮೇಲೆ ವಾಚ್, ಟವೆಲ್ ಕೂಡ ಪತ್ತೆಯಾಗಿದೆ. ಟ್ರಕ್ಕಿಂಗ್ ಸಲುವಾಗಿ ಬಂದಿದ್ದ ಅವರು ಭಾನುವಾರದವರೆಗೂ ಸ್ನೇಹಿತರ ಸಂಪರ್ಕದಲ್ಲಿದ್ದರು. ಆದರೆ ಈಗ ಅವರ ಸುಳಿವಿಲ್ಲ.
ಈ ಬಗ್ಗೆ ಕೇರಳದ ನಲ್ಲಳಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ದೂರು ದಾಖಲಾಗಿದ್ದು, ಇಂದು ಕೇರಳ ಪೊಲೀಸರು ತನಿಖೆಯ ಸಲುವಾಗಿ ಕೊಪ್ಪಾಗೆ ಬರುವ ಸಾಧ್ಯತೆ ಇದೆ. ಸದ್ಯ ಈಗಾಗಲೇ ಕೊಪ್ಪ ಪೊಲೀಸರು ನಾಪತ್ತೆಯಾಗಿರುವ ಸಂದೀಪ್‍ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply