ಎಸ್‍ಎಫ್‍ಐ ಉಗ್ರರ ಸಂಘಟನೆಯಾಗಿದ್ದು ಬ್ಯಾನ್ ಮಾಡಿ: ಕಾಂಗ್ರೆಸ್ ಸಂಸದ ಆಕ್ರೋಶ

ನವದೆಹಲಿ: ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ(ಎಸ್‍ಎಫ್‍ಐ) ಭಯೋತ್ಪಾದಕ ಸಂಘಟನೆ ಇದ್ದಂತೆ, ಇದನ್ನು ನಿಷೇಧಿಸಬೇಕು ಎಂದು ಕಾಂಗ್ರೆಸ್ ಸಂಸದ ಹೈಬಿ ಈಡನ್ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.

ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕೆಎಸ್‍ಯುನ ಮಹಿಳಾ ನಾಯಕಿಯೊಬ್ಬರಿಗೆ ಎಸ್‍ಎಫ್‍ಐ ಕಾರ್ಯಕರ್ತರು ಥಳಿಸಿದ ಘಟನೆಯ ವೀಡಿಯೋದಲ್ಲಿ ವೈರಲ್ ಆಗುತ್ತಿದೆ. ಇದರಿಂದಾಗಿ ಎಸ್‍ಎಫ್‍ಐನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಘಟನೆ ಹಿನ್ನೆಲೆ: ಮಾರ್ಚ್ 15 ರಂದು ತಿರುವನಂತಪುರಂನಲ್ಲಿರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕೆಎಸ್‍ಯು ಮತ್ತು ಎಸ್‍ಎಫ್‍ಐ ನಡುವೆ ಘರ್ಷಣೆ ಸಂಭವಿಸಿತ್ತು. ಕೆಎಸ್‍ಯು ಅಧ್ಯಕ್ಷೆ ಸಫ್ನಾ ಯಾಕೂಬ್ ಅವರನ್ನು ಎಸ್‍ಎಫ್‍ಐ ಸದಸ್ಯರು ಥಳಿಸಿದ್ದರು. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‍ಎಫ್‍ಐ) ಕಾರ್ಯಕರ್ತರು ಆಕೆಯನ್ನು ಕ್ರೂರವಾಗಿ ಥಳಿಸಿ ರಸ್ತೆಯಲ್ಲಿ ಎಳೆದೊಯ್ದಿದ್ದರು.

ಕಾಲೇಜು ಚುನಾವಣೆಯಲ್ಲಿ ಕೇರಳ ವಿದ್ಯಾರ್ಥಿ ಸಂಘ (ಕೆಎಸ್‍ಯು) ಗೆಲುವು ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್‍ಯು ಸದಸ್ಯರು ಸಂಭ್ರಮಾಚರಣೆ ಮಾಡುತ್ತಿದ್ದಾಗ ಘರ್ಷಣೆ ನಡೆದಿದೆ. ವರದಿಗಳ ಪ್ರಕಾರ, ಚುನಾವಣಾ ವಿಜಯೋತ್ಸವದ ನಂತರ ದಾಳಿ ನಡೆದಿದ್ದು, ಎಸ್‍ಎಫ್‍ಐ ಸದಸ್ಯರು ಸಂಭ್ರಮಾಚರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕೆಎಸ್‍ಯು ಸದಸ್ಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಜೇಮ್ಸ್ ಚಿತ್ರದ ತೆರಿಗೆ ವಿನಾಯಿತಿ ಬಗ್ಗೆ ಸಿಎಂ ಬಳಿ ಚರ್ಚೆ ಮಾಡ್ತೇನೆ: ಆರ್.ಅಶೋಕ್

ಇದೇ ವೇಳೆ ಕೆಎಸ್‍ಯು ಕಾರ್ಯಕರ್ತನೊಬ್ಬ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಜಗಳಕ್ಕೆ ಕಾರಣವಾಯಿತು ಎಂದು ಎಸ್‍ಎಫ್‍ಐ ಆರೋಪಿಸಿದೆ. ಈ ವರ್ಷ ನಡೆದ ಯೂನಿಯನ್ ಚುನಾವಣೆಯಲ್ಲಿ ಎಸ್‍ಎಫ್‍ಐ ಜಯಗಳಿಸಿದ್ದರೂ, ಕೆಎಸ್‍ಯು ಒಕ್ಕೂಟದ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದೆ. ಇದು ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ: ಸಿದ್ದರಾಮಯ್ಯ

Comments

Leave a Reply

Your email address will not be published. Required fields are marked *