ಬೆಳಗಾವಿ: ಕಾಂಗ್ರೆಸ್ ಹೈ ಕಮಾಂಡ್‍ಗೂ ಬೆಳಗಾವಿ ರಾಜಕೀಯ ಕಲಹ ತಲೆನೋವಾಗಿದೆ. ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಸಂಘರ್ಷ ಭುಗಿಲೆದ್ದಿದೆ.
ತಡರಾತ್ರಿವರೆಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಎರಡು ಬಣದವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ರು. ತಮಗಾಗುತ್ತಿರುವ ಕಿರಿಕಿರಿ ಬಗ್ಗೆ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಪರಸ್ಪರ ದೂರು ನೀಡಿದ್ರು. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸಹೋದರರಿಂದ ರಾಜ್ಯ ನಾಯಕರಿಗೆ ದೂರು!

ಬಿಜೆಪಿ ಪ್ರಾಬಲ್ಯದ ನಡುವೆ ದೊಡ್ಡ ಜಿಲ್ಲೆಯಲ್ಲಿ ಕಷ್ಟಪಟ್ಟು ಪಕ್ಷ ಕಟ್ಟಿದ್ದು ನಾವು. ನಮಗೆ ಗೌರವ ಇಲ್ಲಾ ಅಂದ್ರೆ ಹೇಗೆ ಎಂದು ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ರು. ಅಷ್ಟೇ ಅಲ್ಲ ಏನೆ ಇದ್ದರು ನಮ್ಮ ಬಳಿ ಚರ್ಚಿಸಬಹುದು. ಅದು ಬಿಟ್ಟು ನಮ್ಮ ಮೇಲೆ ಡಾಮಿನೇಟ್ ಮಾಡೋಕೆ ಬಂದ್ರೆ ಕೈಕಟ್ಟಿ ಕೂರೋಕೆ ಆಗಲ್ಲ. ಪದೇ ಪದೇ ಸಹೋದರ ಸತೀಶ್ ಜಾರಕಿಹೋಳಿ ವಿರುದ್ಧ ಜಿದ್ದಿಗೆ ಬಿದ್ದಿದ್ದಾರೆ. ಅವರನ್ನ ಮನವೊಲಿಸೋದು ಕಷ್ಟ ಅಂದ್ರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ದೊಡ್ಡವರು ನನಗೆ ಆದರ್ಶ, ಮಹಾಗುರು: ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

ಹೀಗೆ ರಾಜ್ಯ ನಾಯಕರಲ್ಲದೆ ಎಐಸಿಸಿ ಮಟ್ಟದಲ್ಲಿಯೂ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಕೊನೆಗೆ ಎರಡು ಬಣಕ್ಕೂ ಸದ್ಯಕ್ಕೆ ಸುಮ್ಮನಿರಿ, ಯಾರು ಬಹಿರಂಗವಾಗಿ ಮಾತನಾಡಬೇಡಿ ಅಂತ ಸೂಚನೆ ನೀಡಿ ವೇಣುಗೋಪಾಲ್ ಸುಮ್ಮನಾಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ; ಪಿಎಲ್‍ಡಿ ಬ್ಯಾಂಕ್ ಚುನಾವಣೆ: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸಹೋದರರು ಗರಂ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply