ಮುಂಬೈ: ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ತಾವು ನಿರೂಪಣೆ ಮಾಡುತ್ತಿರುವ ಕೌನ್ ಬನೇಗಾ ಕರೋಡ್ಪತಿ ‘(ಕೆಬಿಸಿ) ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಖಾಸಗಿ ಚಾನೆಲ್ನಲ್ಲಿ ಅಮಿತಾಬ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ನಾಳೆ ಅಂದರೆ ಅಕ್ಟೋಬರ್ 11ರಂದು ಅಮಿತಾಬ್ 75ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಈ ಸಂಬಂಧ ಕೆಬಿಸಿ ಕಾರ್ಯಕ್ರಮದ ಆಯೋಜಕರು ಅಮಿತಾಬ್ ಅವರು ಕಲಿತಿರುವ ಶಾಲಾ ದಿನಗಳ ವಿಡಿಯೋ ಕ್ಲಿಪ್ ನ್ನು ತೋರಿಸುವ ಮೂಲಕ ಸರಪ್ರೈಸ್ ಗಿಫ್ಟ್ ನೀಡಿದ್ದಾರೆ. ಈ ಕ್ಲಿಪ್ ನ್ನು ನೋಡಿದ ಅಮಿತಾಬ್ ಅವರು ಕಣ್ಣು ತೇವಗೊಂಡಿತು.

ವಿಡಿಯೋ ಕ್ಲಿಪ್ ನಲ್ಲಿ ಅಮಿತಾಬ್ ಕಾಲೇಜು ದಿನಗಳ ಕ್ಷಣಗಳ ಫೋಟೋಗಳನ್ನು ನೋಡಬಹುದಾಗಿದೆ. ಅಮಿತಾಬ್ ವಿಡಿಯೋ ನೋಡಿದ ಬಳಿಕ ತಮ್ಮ ತಂದೆಯ ಹಾಗು ತಾವು ಶಾಲೆಯಲ್ಲಿ ನಾಟಕ ಮಾಡುತ್ತಿರುವ ನೆನಪುಗಳನ್ನು ಹಂಚಿಕೊಂಡು, ಕಾರ್ಯಕ್ರಮದ ಆಯೋಜಕರಿಗೂ ಧನ್ಯವಾದ ತಿಳಿಸಿದ್ದಾರೆ. ಈ ಕಾರ್ಯಕ್ರಮ ಮಂಗಳವಾರ ಪ್ರಸಾರವಾಗಲಿದ್ದು, ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಬಿಸಿ ಇದು 9ನೇ ಆವೃತ್ತಿಯಾಗಿದ್ದು, ಈ ಕಾರ್ಯಕ್ರಮವನ್ನು ದೇಶದಲ್ಲಿಯೇ ಅತಿ ಹೆಚ್ಚು ಜನರು ನೋಡುತ್ತಾರೆ ಎಂದು ಹೇಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಬರುವ ಸ್ಪರ್ಧಿಗಳು ಕೇಳುವ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದಂತೆ ಬಹುಮಾನವಾಗಿ ಭಾರೀ ಹಣವನ್ನು ಪಡೆಯುತ್ತಾರೆ. ಈ ಆವೃತ್ತಿಯಲ್ಲಿ ಬಹುಮಾನವು 7 ಕೋಟಿ ರೂ. ಅಂತಿಮ ಮೊತ್ತವಾಗಿದ್ದು, ಇದೂವರೆಗೂ ಯಾರು ಈ ಮೊತ್ತವನ್ನು ಜಯಿಸಿಲ್ಲ. ಅಕ್ಟೋಬರ್ 2ರಂದು ನಡೆದ ಶೋನಲ್ಲಿ ಜಾರ್ಖಂಡ್ ರಾಜ್ಯದ ಸಾಮಾಜಿಕ ಕಾರ್ಯಕರ್ತೆಯಾಗಿರುವ ಅನಾಮಿಕ ಮಜುಂದಾರ್ 1 ಕೋಟಿ ರೂ. ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದರು.
https://twitter.com/aaron_pereira94/status/917044858715496449



Leave a Reply