ಲಕ್ನೋ: ಆಸ್ಪತ್ರೆಯವರು ಅಂಬುಲೆನ್ಸ್ ನೀಡದ ಕಾರಣ ಸಹೋದರನ 7 ತಿಂಗಳ ಮಗುವಿನ ಮೃತದೇಹವನ್ನ ಹೆಗಲ ಮೇಲೆ ಹಾಕಿಕೊಂಡು ಚಿಕ್ಕಪ್ಪ ಸೈಕಲ್ ತುಳಿದುಕೊಂಡು ಹೋದ ದಾರುಣ ಘಟನೆ ಉತ್ತರಪ್ರದೇಶದ ಕೌಸಂಬಿಯಲ್ಲಿ ನಡೆದಿದೆ.
ಜಿಲ್ಲಾಸ್ಪತ್ರೆಯಲ್ಲಿ ಮಗು ದಾಖಲಿಸಿದ ಅಪ್ಪ, ಹಣ ಹೊಂದಿಸಲು ಅಲಹಾಬಾದ್‍ಗೆ ಹೋಗಿದ್ದರು. ಈ ವೇಳೆ ಮಗು ಮೃತಪಟ್ಟಿದ್ದು ಚಿಕ್ಕಪ್ಪ ಬ್ರಿಜ್‍ಮೋಹನ್ ಆಸ್ಪತ್ರೆಯಲ್ಲಿದ್ದರು. ಶವ ಸಾಗಿಸಲು ಅಂಬುಲೆನ್ಸ್ ಡ್ರೈವರ್‍ಗೆ ಹಲವು ಬಾರಿ ಕೇಳಿದ್ರೂ ಆತ ಬರೋಕೆ ನಿರಾಕರಿಸಿದ್ದಕ್ಕೆ ಸೈಕಲ್‍ನಲ್ಲೇ ಶವ ಸಾಗಿಸಿದ್ದಾರೆ.
ಘಟನೆ ಬಗ್ಗೆ ಡ್ಯೂಟಿ ಡಾಕ್ಟರ್ ಹಾಗೂ ಅಂಬುಲೆನ್ಸ್ ಡ್ರೈವರ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಸೋದಾಗಿ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಅಂಬುಲೆನ್ಸ್ ನಿಡದೇ ಇರೋ ಕಾರಣಕ್ಕೆ ಇಂಥ ಘಟನೆಗಳು ದೇಶದಲ್ಲಿ ಈ ಹಿಂದೆಯೂ ನಡೆದಿತ್ತು. ಒಡಿಶಾದ ಮಾಂಝಿ ತನ್ನ ಪತ್ನಿಯ ಶವ ಹೊತ್ತು 10 ಕಿ.ಮೀಟರ್ ನಡೆದಿದ್ದರೆ, ಅಸ್ಸಾಂನ ಸಿಎಂ ಕ್ಷೇತ್ರದಲ್ಲೇ ಶವವನ್ನ ಸೈಕಲ್‍ನಲ್ಲಿ ಸಾಗಿಸಲಾಗಿತ್ತು. ಕೆಲ ದಿನಗಳ ಹಿಂದೆ ಬಿಹಾರದಲ್ಲೂ ಮೃತ ಪತ್ನಿ ಶವವನ್ನ ಗಂಡ ಬೈಕ್‍ನಲ್ಲಿ ಸಾಗಿಸಿದ್ದ.
https://youtu.be/O4XoCO_SpmI

Leave a Reply