ಕಾಟೇರ (Katera) ಸಿನಿಮಾದ ಸಕ್ಸಸ್ ಬೆನ್ನಲ್ಲೇ ಕಾಟೇರ ಟೀಮ್ ದೇವಸ್ಥಾನಗಳಿಗೆ ಭೇಟಿ ನೀಡಿ, ಭಗವಂತನ ದರ್ಶನ ಮಾಡುತ್ತಿದೆ. ಮೊನ್ನೆಯಷ್ಟೇ ನಿರ್ದೇಶಕ ತರುಣ್ ಸುಧೀರ್ ಕೊರಗಜ್ಜನ ದೇವಸ್ಥಾನಕ್ಕೆ ಮತ್ತು ಧರ್ಮಸ್ಥಳದ ಮಂಜುನಾಥ ಟೆಂಪಲ್ ಗೆ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡಿದ್ದರು. ಇದೀಗ ದರ್ಶನ್ (Darshan) ಕೂಡ ತಿರುಪತಿಯಲ್ಲಿ (Tirupati Thimmappa) ಕಾಣಿಸಿಕೊಂಡಿದ್ದಾರೆ.

ಮುಂದಿನ ವಾರದ ದರ್ಶನ್ ಅವರ ಹುಟ್ಟು ಹಬ್ಬ. ಅದಕ್ಕೂ ಮುನ್ನ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹುಟ್ಟು ಹಬ್ಬ ಮತ್ತು ಕಾಟೇರ ಸಿನಿಮಾದ ಸಕ್ಸಸ್ ಪ್ರಯುಕ್ತವಾಗಿ ದೇವಸ್ಥಾನಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿ ಇದೆ.

ಈಗಾಗಲೇ ಹುಟ್ಟು ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾಣಿಸಿದ್ದಾರೆ ದರ್ಶನ್. ಕೇಕ್, ಹಾರು, ತುರಾಯಿ ಬದಲು ದವಸ ಧಾನ್ಯಗಳನ್ನು ನೀಡುವಂತೆ ಕೇಳಿದ್ದಾರೆ. ಅನಾಥಾಶ್ರಮಗಳಿಗೆ ಅಕ್ಕಿ, ಬೆಳೆ, ಆಹಾರ ಪದಾರ್ಥಗಳನ್ನು ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಪ್ರತಿ ಬಾರಿಯೂ ತಮ್ಮ ಅಭಿಮಾನಿಗಳಿಗೆ ಈ ಸಂದೇಶವನ್ನು ಕೊಡುತ್ತಾ ಬಂದಿದೆ. ನೆಚ್ಚಿನ ನಟನ ಮಾತಿನಂತೆ ಅಭಿಮಾನಿಗಳು ಕೂಡ ಆ ಕೆಲಸವನ್ನು ಮಾಡುತ್ತಾ ಬಂದು, ಮಾದರಿಯಾಗಿದ್ದಾರೆ.
