ಕಾರವಾರ: ಗಂಡ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಕೇಳಿ ಆತನ ಹೆಂಡತಿಯೂ ಸಹ ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯ ಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ನಡೆದಿದೆ.
ವೆಂಕಟೇಶ್ ಕೊಡಿಯಾ, ಮಾದೇವಿ ಕೊಡಿಯಾ ಒಂದೇ ದಿನ ಇಹಲೋಕ ತ್ಯಜಿಸಿದ ದಂಪತಿ. ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಾಗ ವೆಂಕಟೇಶ್ ಕೊಡಿಯಾ ಅವರನ್ನು ಹತ್ತಿರದ ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲೇ ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ತನ್ನ ಮಗಳ ಮನೆಯಲ್ಲಿದ್ದ ವೆಂಕಟೇಶ್ ಅವರ ಪತ್ನಿ ಮಾದೇವಿಗೆ ಈ ಸುದ್ದಿ ತಿಳಿದು ಶಾಕ್‍ಗೆ ಒಳಗಾಗಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಂದೆ ತಾಯಿಯನ್ನು ಒಂದೇ ದಿನ ಕಳೆದುಕೊಂಡ ಮಕ್ಕಳು ಮತ್ತು ಕುಟುಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply