ಬಹುಕಾಲದ ಗೆಳತಿ  ಜೊತೆ ನಟ ಕಾರ್ತಿಕೇಯ ನಿಶ್ಚಿತಾರ್ಥ – ಫೋಟೋ ವೈರಲ್

ಹೈದರಾಬಾದ್: ಟಾಲಿವುಡ್ ಸಿನಿಮಾ ‘ಆರ್‌ಎಕ್ಸ್ 100’ ಸಿನಿಮಾ ಖ್ಯಾತಿಯ ನಟ ಕಾರ್ತಿಕೇಯ ಗೊಮ್ಮಕೊಂಡಾ ತಮ್ಮ ಬಹುಕಾಲದ ಗೆಳತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಕಾರ್ತಿಕೇಯರವರ ಎಂಗೇಜ್ ಮೆಂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

‘ಪ್ರೇಮತೋ ಮೀ ಕಾರ್ತಿಕ್’ ಸಿನಿಮಾದ ಮೂಲಕ ಟಾಲಿವುಡ್‍ಗೆಎಂಟ್ರಿ ಕೊಟ್ಟ ಕಾರ್ತಿಕೇಯಗೆ ಖ್ಯಾತಿ ತಂದು ಕೊಟ್ಟ ಸಿನಿಮಾ ‘ಆರ್‍ಎಕ್ಸ್ 100’. ಇಷ್ಟು ದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಕಾರ್ತಿಕೇಯ ಇದೀಗ 10 ವರ್ಷಗಳಿಂದ ಸ್ನೇಹಿತೆಯಾಗಿದ್ದ ಲೋಹಿತಾರೊಂದಿಗೆ ಹೈದರಾಬಾದ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಡಾಲಿಗೆ ಜೋಡಿಯಾದ ಆರ್‌ಎಕ್ಸ್ 100 ಚೆಲುವೆ

ಆಗಸ್ಟ್ 23ರಂದು ಗುರು-ಹಿರಿಯ ಮುಂದೆ ಉಂಗುರ ಬದಲಿಸಿಕೊಂಡಿರುವ ಕಾರ್ತಿಕೇಯ ಲೋಹಿತಾರೊಂದಿಗೆ ಹೊಸ ಜೀವನ ಆರಂಭಿಸಲು ಮುಂದಾಗಿದ್ದಾರೆ. ಸದ್ಯ ಇವರಿಬ್ಬರ ನಿಶ್ಚಿತಾರ್ಥ ಫೋಟೋವನ್ನು ಕಾರ್ತಿಕೇಯರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ಸ್ನೇಹಿತೆ ಈಗ ನನ್ನ ಬಾಳ ಸಂಗಾತಿಯಾಗುತ್ತಿದ್ದಾಳೆ ಎಂದು ಹೇಳಲು ಖುಷಿಯಾಗುತ್ತಿದೆ. 2010ರಲ್ಲಿ ನಾನು ಲೋಹಿತಾರನ್ನು ವಾರಂಗಲ್‍ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ. ದಶಕದ ಪರಿಚಯ ಹೀಗೆ ಮುಂದುವರೆಯಲಿ ಎಂದು ಕ್ಯಾಪ್ಷನ್‍ನ್ಲಿ ಬರೆದುಕೊಂಡಿದ್ದಾರೆ.

ಕಾರ್ತಿಕೇಯರವರು ‘ಪ್ರೇಮತೋ ಮೀ ಕಾರ್ತಿಕ್’ ‘ಆರ್‌ಎಕ್ಸ್ 100’, ಹಿಪ್ಪಿ, ಗುಣ369, ಗ್ಯಾಂಗ್ ಲೀಡರ್, 90ಎಂಎಲ್, ಚಾವು ಕಾಬುರು ಚಾಲಾಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕಾಲಿವುಡ್ ನಟ ಅಜಿತ್ ಕುಮಾರ್ ನಟಿಸುತ್ತಿರುವ ವಾಲಿಮೈ ಸಿನಿಮಾದಲ್ಲಿ ಮೊದಲ ಬಾರಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಮೋತಿಲಾಲ್ ನೆಹರು ವಿಡಿಯೋ ಪೋಸ್ಟ್- ನಟಿ ಪಾಯಲ್ ರೊಹ್ಟಗಿ ಬಂಧನ

Comments

Leave a Reply

Your email address will not be published. Required fields are marked *