ತಂದೆ ರಾಜಮೌಳಿ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಕಾರ್ತಿಕೇಯ

‘ಆರ್‌ಆರ್‌ಆರ್’ (RRR) ಸಿನಿಮಾದ ಮಾಸ್ಟರ್ ಮೈಂಡ್ ರಾಜಮೌಳಿ (Rajamouli) ಅವರು ಸದಾ ಸಿನಿಮಾ ವಿಚಾರವಾಗಿಯೇ ಹೆಚ್ಚು ಸುದ್ದಿ ಮಾಡುತ್ತಾರೆ. ಆದರೆ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಅವರೆಲ್ಲೂ ಹೆಚ್ಚಾಗಿ ಮಾತನಾಡುವುದಿಲ್ಲ. ನಿರ್ದೇಶಕ ರಾಜಮೌಳಿ- ರಮಾ ದಂಪತಿ ಪುತ್ರ ಕಾರ್ತಿಕೇಯ (Karthikeya) ಅವರು ತಮ್ಮ ತಂದೆ ರಾಜಮೌಳಿ ಬಗ್ಗೆ ಮಾತನಾಡಿದ್ದಾರೆ.

ಕಾರ್ತಿಕೇಯ ಅವರು ಚಿತ್ರರಂಗದಲ್ಲಿ ತಮ್ಮದೇ ಶೈಲಿನಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕ-ನಿರ್ಮಾಪಕನಾಗಿ ಕೆಲಸ ಮಾಡಿದ್ದಾರೆ. ಕಾರ್ತಿಕೇಯ ಅವರು ರಾಜವೌಳಿ ಅವರ ಸ್ವಂತ ಮಗ ಅಲ್ಲ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ರಾಜಮೌಳಿ- ರಮಾ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಅವರ ಮದುವೆಗೂ ಮುನ್ನವೇ 8 ವರ್ಷಗಳ ಹಿಂದೆ ಕಾರ್ತಿಕೇಯ ಹುಟ್ಟಿದ್ದರು. ಈ ಹಿಂದೆ ರಾಜಮೌಳಿ ಅವರ ಮದುವೆ ಪ್ರಪೋಸಲ್‌ನ ರಮಾ ತಿರಸ್ಕರಿಸಿದರು. ಆದರೆ ರಾಜಮೌಳಿ ಅವರು, ಕಾರ್ತಿಕೇಯ ತೋರುತ್ತಿದ್ದ ಪ್ರೀತಿ ಕಂಡು ಮದುವೆಗೆ ರಮಾ ಸಮ್ಮತಿ ನೀಡಿದ್ದರು. ನನ್ನ ತಾಯಿನ ಮದುವೆ ಆಗೋಕು ಮೊದಲೇ ರಾಜವಳಿ ಅವರ ಪರಿಚಯವಿತ್ತು. ಆಗಲೇ ರಾಜಮೌಳಿ ಅವರನ್ನ ತಂದೆ ಎಂದು ಫಿಕ್ಸ್ ಆಗಿದ್ದೆ ಎಂದು ಸಂದರ್ಶನವೊಂದರಲ್ಲಿ ಕಾರ್ತಿಕೇಯ ಹೇಳಿದ್ದಾರೆ. ಇದನ್ನೂ ಓದಿ:ಮದುವೆಗೂ ಮುನ್ನ ನಟಿ ಇಲಿಯಾನ ಮಗು : ಬೆಂಬಲಿಸಿದ ತಾಯಿ

ನಿಮ್ಮ ಅಮ್ಮ ಸಿಂಗಲ್ ಮದರ್. ಆ ಸಮದಲ್ಲಿ ರಾಜಮೌಳಿ ಅವರು ಬಂದು ಅವರನ್ನು ಮದುವೆ ಆಗುತ್ತೀನಿ ಅಂದಾಗ ನಿಮಗೆ ಹೇಗನಿಸಿತು ಎಂದು ಕಾರ್ತಿಕೇಯಗೆ ಸಂದರ್ಶನದಲ್ಲಿ ಪ್ರಶ್ನೆ ಕೇಳಲಾಗಿದೆ. ಅಮ್ಮ, ರಾಜಮೌಳಿ ಅವರು ಮದುವೆ ಆಗುವುದಕ್ಕೆ ಒಂದು ವರ್ಷ ಮುಂಚಿನಿಂದಲೂ ನಮ್ಮ ಮನೆಗೆ ಬರುತ್ತಿದ್ದರು. ನನ್ನನ್ನು ಅಮ್ಮನನ್ನು ಡಿನ್ನರ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಅವರು ಶೂಟಿಂಗ್ ಬ್ಯುಸಿಯಲ್ಲಿ ಬರದೇ ಇದ್ದರೆ ನಾನೇ ಫೋನ್ ಮಾಡಿ ಯಾಕೆ ಬಂದಿಲ್ಲ ಎಂದು ಕೇಳುತ್ತಿದ್ದೆ, ಸಂಬಂಧಿಕರೇ ಆಗಿದ್ದರಿಂದ ರಾಜಮೌಳಿ ಅವರು ಮೊದಲಿನಿಂದಲೂ ಗೊತ್ತಿತ್ತು.

ಆದರೆ ಮದುವೆಗೂ ಒಂದು ವರ್ಷ ಮೊದಲು ಮನೆಗೆ ಹೆಚ್ಚು ಬರುತ್ತಿದ್ದರು. ನನಗೆ ಆಗ 8ರಿಂದ 9 ವರ್ಷ ವಯಸ್ಸು. ಅಮ್ಮ, ನಾನು ಅವರೊಟ್ಟಿಗೆ ಹೊರಗೆ ಹೋಗುತ್ತಿದ್ದೆವು. ಆಗಲೇ ನನಗೆ ತಂದೆಯ ವೈಬ್ ಬಂದುಬಿಟ್ಟಿತ್ತು. ಒಬ್ಬ ತಂದೆ ರೀತಿ ಫೀಲ್ ಆಗುತ್ತಿತ್ತು. ಮೈಂಡ್‌ನಲ್ಲಿ ತಂದೆ ಅಂತ ಫಿಕ್ಸ್ ಆಗಿಬಿಟ್ಟಿದ್ದೆ. ಅವರನ್ನು ಬಿಡಬೇಕು ಎಂದು ಅನ್ನಿಸಲಿಲ್ಲ ಎಂದು ಕಾರ್ತಿಕೇಯ ವಿವರಿಸಿದ್ದಾರೆ.