ಹಾವೇರಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು SSLC ಟಾಪರ್

ಹಾವೇರಿ: 2022ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯದ ಟಾಪರ್‍ಗಳಲ್ಲಿ ಒಬ್ಬರಾಗಿದ್ದಾರೆ.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಳೇಮನ್ನಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಪ್ರವೀಣ್ ನೀರಲಗಿ ಹಾಗೂ ಮಧು ಶೇತಸನದಿ ಟಾಪರ್‍ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗೆ ಸಿಹಿ ತಿನ್ನಿಸಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ತಂದೆ, ತಾಯಿ ಹಾಗೂ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಪ್ರವೀಣ್ ಅಭ್ಯಾಸ ಮಾಡಿದ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ಬಡತನವಿದ್ದರೂ, ಯಾವುದೇ ಕೋಚಿಂಗ್, ಟ್ಯೂಷನ್‍ಗೆ ಹೋಗದೆ 625 ಅಂಕವನ್ನು ಪಡೆದುಕೊಂಡಿದ್ದಾನೆ. ಪ್ರವೀಣ್ ಮುಂದೆ ಡಾಕ್ಟರ್ ಆಗುವ ಕನಸು ಹೊಂದಿದ್ದಾನೆ. ಇದನ್ನೂ ಓದಿ: ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಪುತ್ರಿ ಬೆಳಗಾವಿಗೆ ಟಾಪ್

ಮತ್ತೊಂದೆಡೆ ಹಾವೇರಿಯ ಕನಕದಾಸ ಪ್ರೌಢಶಾಲೆಯ ಮಧು ಶೇತಸನದಿ ವಿದ್ಯಾರ್ಥಿನಿ 626 ಕ್ಕೆ 625 ಅಂಕವನ್ನು ಪಡೆದುಕೊಂಡಿದ್ದಾಳೆ. ಇದೀಗ ಮಧು ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಸಿಹಿ ತಿನ್ನಿಸಿ ಸಂತಸ ಪಟ್ಟಿದ್ದಾರೆ. ಅಲ್ಲದೇ 6 ರಿಂದ 10 ಗಂಟೆಗಳ ವಿದ್ಯಾಭ್ಯಾಸ ಮಾಡುತ್ತಿದ್ದ ನನಗೆ ಶಿಕ್ಷಕರು ಸಹ ಬೆಳಗ್ಗೆ ಫೋನ್ ಮಾಡಿ, ಓದಲು ಎಬ್ಬಿಸುತ್ತಿದ್ದರು. ನಾನು ಡಾಕ್ಟರ್ ಆಗುವ ಕನಸು ಹೊಂದಿದ್ದೇನೆ ಎಂದು ಮಧು ತಿಳಿಸಿದ್ದಾಳೆ. ಸದ್ಯ 625 ಅಂಕ ಪಡೆದ ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಔಟ್‌ ಆಫ್‌ ಔಟ್‌ – ಚಿಕ್ಕಬಳ್ಳಾಪುರದ ಒಂದೇ ಶಾಲೆಯ ಮೂವರು ರಾಜ್ಯಕ್ಕೆ ಪ್ರಥಮ

Comments

Leave a Reply

Your email address will not be published. Required fields are marked *