SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಮಾ.28 ರಿಂದ ಆರಂಭ

ಬೆಂಗಳೂರು: 2022ರ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಎಸ್‍ಎಸ್‍ಎಲ್‍ಸಿ ಎಕ್ಸಾಂ ಬೋರ್ಡ್ ಇಂದು ಪ್ರಕಟಿಸಿದೆ.

ಮಾರ್ಚ್ 28 ರಿಂದ ಏಪ್ರಿಲ್ 11 ವರೆಗೆ ಪರೀಕ್ಷೆ ನಡೆಯಲಿದೆ. ಒಂದು ದಿನ ಬಿಟ್ಟು ಒಂದು ದಿನ ಪರೀಕ್ಷೆಯ ನಡೆಯಲಿದ್ದು. ಹಳೆಯ ಮಾದರಿಯಲ್ಲೇ ಪರೀಕ್ಷೆ ನಡೆಯಲಿದೆ. ಪ್ರಥಮ ಬಾಷೆಗೆ ಗರಿಷ್ಠ 100 ಅಂಕ ಉಳಿದ ವಿಷಯಗಳಿಗೆ ಗರಿಷ್ಠ 80 ಅಂಕ ನಿಗದಿಪಡಿಸಲಾಗಿದೆ. ಪ್ರತಿ ಪ್ರಶ್ನೆ ಪತ್ರಿಕೆ ಓದಲು ವಿದ್ಯಾರ್ಥಿಗಳಿಗೆ 15 ನಿಮಿಷ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಎಲ್ಲರಿಗೂ ಮಾನಸಿಕ ಆರೋಗ್ಯದ ತಪಾಸಣೆ ಅಗತ್ಯ: ಸುಧಾಕರ್

ವೇಳಾಪಟ್ಟಿ ಈ ರೀತಿ ಇದೆ:
ಮಾರ್ಚ್ 28- ಪ್ರಥಮ ಭಾಷೆ ವಿಷಯಗಳು
ಮಾರ್ಚ್ 30 – ದ್ವೀತಿಯ ಭಾಷೆ
ಏಪ್ರಿಲ್ 1 – ಕೋರ್ ಸಬ್ಜೆಕ್ಟ್ – ಅರ್ಥಶಾಸ್ತ್ರ
ಏಪ್ರಿಲ್ 4 – ಗಣಿತ
ಏಪ್ರಿಲ್ 6 – ಸಮಾಜ ವಿಜ್ಞಾನ
ಏಪ್ರಿಲ್ 8 – ತೃತೀಯ ಭಾಷೆ ವಿಷಯಗಳು
ಏಪ್ರಿಲ್ 11 – ವಿಜ್ಞಾನ

Comments

Leave a Reply

Your email address will not be published. Required fields are marked *