ಫಲಿತಾಂಶದಲ್ಲಿ ಇತಿಹಾಸ ನಿರ್ಮಿಸಿದ ಪಿಯು ಬೋರ್ಡ್

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು 2019ರಲ್ಲಿ ನಡೆಸಿರುವ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿಯ ಫಲಿತಾಂಶ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿ ಮಾಡಿದೆ.

ಪಿಯುಸಿ ಬೋರ್ಡ್ ಸ್ಥಾಪನೆ ಆಗಿ 47 ವರ್ಷವಾಗಿದ್ದು, ಸ್ಥಾಪನೆ ಬಳಿಕ ಅತಿ ಹೆಚ್ಚು ಶೇಕಡಾ ಫಲಿತಾಂಶವನ್ನು ಈ ಬಾರಿ ಪಡೆಯಲಾಗಿದೆ. 1973 ರಲ್ಲಿ ಮೊದಲ ಬಾರಿಗೆ ಫಲಿತಾಂಶ ಪಡೆದಿದ್ದ ಮಂಡಳಿ ಶೇ.49 ವಿದ್ಯಾರ್ಥಿಗಳು ಉತೀರ್ಣರಾಗಿದ್ದರು. ಕಳೆದ ವರ್ಷ 2018 ರಲ್ಲಿ ಶೇ. 59 ಫಲಿತಾಂಶ ಬಂದಿತ್ತು. ಈ ವರ್ಷ ಶೇ. 61.73 ರಷ್ಟು ಫಲಿತಾಂಶ ಲಭಿಸಿದೆ.

ಪ್ರತಿ ವರ್ಷ ತರಗತಿಗಳು ಆರಂಭವಾಗುತ್ತಿದ್ದ ಅವಧಿಗೂ ಒಂದು ತಿಂಗಳ ಮೊದಲು ಮಂಡಳಿ ಈ ಬಾರಿ ಕಾಲೇಜುಗಳನ್ನು ಬೇಗ ಪ್ರಾರಂಭ ಮಾಡಿತ್ತು. ಇದೇ ವರ್ಷವೇ ಶೇ. 61.73 ಫಲಿತಾಂಶದೊಂದಿಗೆ ಮಂಡಳಿ ಇತಿಹಾಸ ನಿರ್ಮಾಣ ಮಾಡಿದೆ.

ಸದ್ಯ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಿರ್ದೇಶಕಿ ಶಿಖಾ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದು, ಫಲಿತಾಂಶದಲ್ಲಿ ಇತಿಹಾಸ ನಿರ್ಮಾಣ ಮಾಡಿದೆ. ಇಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶ ಪ್ರಕಟಿಸಿದ್ದರು. ಒಟ್ಟು ಹಾಜರಾದ 6,71,653 ವಿದ್ಯಾರ್ಥಿಗಳ ಪೈಕಿ 4,14,587 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

Comments

Leave a Reply

Your email address will not be published. Required fields are marked *