ಜನವರಿಯಿಂದ ಪಕ್ಷಾಂತರ ಪರ್ವ ಆರಂಭ – ಪ್ರಭಾವಿ ಲಿಂಗಾಯತ ಲೀಡರ್ ಬಿಜೆಪಿ ಸೇರ್ಪಡೆ?: ಸತೀಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಜನವರಿಯಿಂದ ಪಕ್ಷಾಂತರ ಪರ್ವ ಆರಂಭವಾಗಲಿದೆ. ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಪಕ್ಷಾಂತರ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಪ್ರಭಾವಿ ಲಿಂಗಾಯತ ಲೀಡರ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನವರಿಯಲ್ಲಿ ಖಂಡಿತವಾಗಿ ಪಕ್ಷಾಂತರ ಪರ್ವ ಆರಂಭ ಆಗಲಿದೆ. ಒಮ್ಮೊಮ್ಮೆ ಬುಕ್ಕಿಂಗ್ ಮಾಡ್ತಾರೆ. ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡ್ತಾರೆ. ರಾಜಕೀಯ ಅಂದ್ರೆ ಹೀಗೆ. ಕೆಲವೊಮ್ಮೆ ಆನ್‍ಲೈನ್ ಬುಕ್ಕಿಂಗ್ ಸಹ ಆಗುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಆಪರೇಷನ್ ಅಮರನಾಥ ಚಾಲೆಂಜ್ ಆಗಿದೆ: ಕರ್ನಲ್ ವಿ.ಎಂ. ನಾಯಕ್

ಪ್ರಭಾಕರ ಕೋರೆ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಬಿಜೆಪಿಯ ಬೇರೆ ಬೇರೆ ಗುಂಪಿನಲ್ಲಿ ಚರ್ಚೆ ಆಗುತ್ತಿದೆ. ಕೆಲವರು ನಾವು ಬಿಜೆಪಿಯಲ್ಲಿ ಇರಬೇಕಾ, ಬೇರೆ ಪಕ್ಷಕ್ಕೆ ಹೋಗಬೇಕಾ ಅಂತಾ ಚರ್ಚೆ ನಡೆಸುತ್ತಿದ್ದಾರೆ. ಅದು ಬಿಜೆಪಿ ಪಕ್ಷ ಅಷ್ಟೇ ಅಲ್ಲ ಎಲ್ಲಾ ಪಕ್ಷದಲ್ಲೂ ಪಕ್ಷಾಂತರ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲಾ ಪಕ್ಷದಲ್ಲೂ ತಮ್ಮ ತಮ್ಮ ಸ್ಥಾನಮಾನ ಗಟ್ಟಿ ಮಾಡಲು ಚರ್ಚೆ ಮಾಡುತ್ತಲೇ ಇರುತ್ತಾರೆ. ಅಂತಿಮ ನಿರ್ಧಾರ ಅವರಿಗೆ ಬಿಟ್ಟಿರುವುದು. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಾರೆ. ಅವರನ್ನು ಸೈಡ್‌ಲೈನ್‌ ಮಾಡಿದ್ದಾರೆ. ಈಗ ಅವರ ಮಕ್ಕಳು ಇಲ್ಲ. ಮುಂದಿನ ಚುನಾವಣೆಯಲ್ಲಿ ಪೂರ್ತಿ ಯಡಿಯೂರಪ್ಪ ಕುಟುಂಬವನ್ನು ಸೈಡ್‌ಲೈನ್‌ ಮಾಡ್ತಾರೆ ಎಂದರು.

ಕಾಂಗ್ರೆಸ್ ಸೇರಲು 6 ಬಿಜೆಪಿ ಕಾರ್ಪೊರೇಟರ್‌ಗಳ ಚಿಂತನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರು ಅಸಮಾಧಾನಗೊಂಡಿದ್ದು ಚರ್ಚೆ ನಡೀತಿದೆ ಎಂಬ ಮಾತು ನನ್ನ ಕಿವಿಗೆ ಬಿದ್ದಿದೆ. ಬಿಜೆಪಿ ಕಾರ್ಪೊರೇಟರ್‌ಗಳು ಪಕ್ಷಕ್ಕೆ ಬಂದ್ರೆ ಸೇರಿಸಿಕೊಳ್ಳುವ ವಿಚಾರ ಚರ್ಚೆ ಆಗಿಲ್ಲ. ಬಂದಾಗ ನೋಡೋಣ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬೆಳಗಾವಿಗೆ ಮೂರು ದಿನ ಯಲ್ಲೋ ಅಲರ್ಟ್ – ತಹಶೀಲ್ದಾರ್ ಅಕೌಂಟ್‍ನಲ್ಲಿ ಹಣ ಇದೆ ಯಾವುದೇ ಸಮಸ್ಯೆ ಇಲ್ಲ: ಡಿ.ಸಿ ನಿತೇಶ್ ಪಾಟೀಲ್

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಂಚಮಸಾಲಿ ಮೀಸಲಾತಿ ಸೇರಿಸುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆ ಜನವರಿ, ಫೆಬ್ರವರಿಯಲ್ಲಿ ಅಂತಿಮ ಆಗುತ್ತದೆ. ಈ ವೇಳೆ ಪಕ್ಷ ಈ ಬಗ್ಗೆ ತೀರ್ಮಾನಿಸುತ್ತದೆ ಎಂದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *