ಪೊಲೀಸರೇ ಡ್ರಗ್ಸ್ ನೀಡಿದ್ರು – ಶ್ರೀಕಿ ಆರೋಪ ಸುಳ್ಳು

ಬೆಂಗಳೂರು: ಬಹುಕೋಟಿ ಬಿಟ್‍ಕಾಯಿನ್ ಹಗರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಹ್ಯಾಕರ್ ಶ್ರೀಕಿ ಕೋರ್ಟ್‍ಗೆ ಪೊಲೀಸರ ವಿರುದ್ಧವೇ ಮಾಡಿದ್ದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು  ಸಾಬೀತಾಗಿದೆ.

ನಾನು ಸಿಸಿಬಿ ಕಸ್ಟಡಿಯಲ್ಲಿ ಇದ್ದಾಗ ಪೊಲೀಸ್ ಇನ್ಸ್‌ಪೆಕ್ಟರ್‌ ಚಂದ್ರಾಧರ್ ನನಗೆ ಮಾದಕದ್ರವ್ಯ ಒದಗಿಸಿದ್ದರು ಎಂದು 20201ರ ಜನವರಿ 11ರಂದು ನ್ಯಾಯಾಧೀಶರ ಮುಂದೆ ಹ್ಯಾಕರ್ ಶ್ರೀಕಿ ಆರೋಪ ಮಾಡಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಧೀಶರು, ಕೂಡಲೇ ಶ್ರೀಕಿಯನ್ನು ವಿಕ್ಟೋರಿಯಾದಲ್ಲಿ ಮಾದಕದ್ರವ್ಯ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದ್ದರು. ಇದನ್ನೂ ಓದಿ: ಡೇವಿಡ್ ವಾರ್ನರ್ ಸಿಡಿಸಿದ ಆ ಒಂದು ಸಿಕ್ಸ್ – ಕ್ರೀಡಾಸ್ಫೂರ್ತಿಗೆ ವಿರುದ್ಧವೇ?

 

ಈ ವೇಳೆ ವಿಕ್ಟೋರಿಯಾ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿತ್ತು. ಹೀಗಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಶ್ರೀಕಿ ಡ್ರಗ್ಸ್ ಸೇವಿಸದೇ ಇರುವುದು ದೃಢವಾಗಿತ್ತು. ಶ್ರೀಕಿ ಆರೋಪ ಸುಳ್ಳೆಂದು ಸಾಬೀತಾಗಿತ್ತು.

ನನ್ನ ಮಗನಿಂದ ಒತ್ತಾಯಪೂರ್ವಕವಾಗಿ ಬೇರೆ ಬೇರೆ ಕೆಲಸ ಮಾಡಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಶ್ರೀಕಿ ತಂದೆ ಗೋಪಾಲ್ ರಮೇಶ್ ಸಹ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ವೇಳೆ ಶ್ರೀಕಿ, ಜಡ್ಜ್ ಮುಂದೆ ಪೊಲೀಸರ ವಿರುದ್ಧ ಡ್ರಗ್ಸ್ ಆರೋಪ ಮಾಡಿದ್ದ. ಇದನ್ನೂ ಓದಿ: ಪುನೀತ್‍ರಿಂದ ಪ್ರೇರಣೆ ಪಡೆದು ದೇಹದಾನಕ್ಕೆ ಮುಂದಾದ ಕಾಫಿನಾಡ ದಂಪತಿ

ಈ ಕುರಿತಂತೆ ವಿವರ ನೀಡಿದ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ, ವಿಕ್ಟೋರಿಯಾದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಎಂದು ಕೋರ್ಟ್ ತಿಳಿಸಿದ್ರೆ, ಇವರು ಕೋವಿಡ್ ನೆಪ ಹೇಳಿ ಬಿಎಂಸಿಯಲ್ಲಿ ಶ್ರೀಕಿಯ ಹೊಟ್ಟೆ ತೊಳಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಆಪಾದನೆ ಮಾಡಿದ್ದಾರೆ.

ಶ್ರೀಕಿ ತಂದೆ, ನನ್ನ ಮಗನಿಗೆ ನಿಮ್ಹಾನ್ಸ್‌ನಲ್ಲಿ ಡ್ರಗ್ಸ್ ಪರೀಕ್ಷೆ ಮಾಡಿಸಿ ಎಂದು ಮತ್ತೆ ಕೋರ್ಟ್ ಮೊರೆ ಹೋಗಿದ್ದಾರೆ. ಫೆಬ್ರವರಿ 15ರಂದೇ ಸಿಸಿಬಿಗೆ ಪತ್ರ ಬರೆದಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಶ್ರೀಕಿಗೆ ಮಾದಕದ್ರವ್ಯ ಕೊಟ್ಟಿದ್ಯಾರು? ಯಾಕೆ ಕೊಡುತ್ತಿದ್ದರು? ತನಿಖೆ ಏಕೆ ಆಗಿಲ್ಲ ಎಂದು ಕಾಂಗ್ರೆಸ್ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

 

Comments

Leave a Reply

Your email address will not be published. Required fields are marked *