ಬೆಂಗಳೂರು: ನಮ್ಮ ಸರ್ಕಾರವನ್ನು ಭ್ರಷ್ಟ ಸರ್ಕಾರ ಅಂಥ ಹೇಳಲು ಅಮಿತ್ ಶಾಗೆ ಯಾವುದೇ ನೈತಿಕತೆ ಇಲ್ಲ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಪಕ್ಕ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾನಾಡುತ್ತಾರೆ. ನಮ್ಮ ಅವಧಿಯಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ ಎಂದು ಟಾಂಗ್ ನೀಡಿದರು.
ರೈತರ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಲೇಬೇಕು. ಸಾಲ ಮನ್ನಾ ಮಾಡದೇ ಇದ್ದರೆ ಕೇಂದ್ರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಯುಪಿಎ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು 70 ಸಾವಿರ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದ್ದರು. ಬಿಜೆಪಿಯವರು ಆಗ ಚಕಾರ ಎತ್ತಿಲ್ಲ. ಈಗ ಯಾಕೆ ಮಾಡುವುದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಶ್ರೀಗಳ ಮುಂದೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಅಮಿತ್ ಶಾ ಅವರಿಗೆ ಗೊತ್ತಿರಬೇಕಿತ್ತು. ಆದಿಚುಂಚನಗಿರಿ ಶ್ರೀಗಳ ಮುಂದೆ ಕಾಲುಮೇಲೆ ಕಾಲು ಹಾಕಿ ಕುಳಿತಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರಕ್ಕೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಆದರೆ ಮಠ-ಮಾನ್ಯಗಳ ಬಗ್ಗೆ ಗೌರವ ಇರಬೇಕು. ಹೇಗೆ ನಡೆದುಕೊಳ್ಳಬೇಕು ಎನ್ನುವುದು ಶಾಗೆ ಗೊತ್ತಿರಬೇಕಿತ್ತು ಎಂದರು.
ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಬಿಎಸ್ ಯಡಿಯೂರಪ್ಪ, ಅಮಿತ್ ಶಾ ಎಡವಟ್ಟು!
ಕಳಸಾ-ಬಂಡೂರಿ ಯೋಜನೆ, ಮಹಾದಾಯಿ ವಿವಾದದ ಕುರಿತು ಪ್ರತಿಪಕ್ಷ ನಾಯಕರು, ಸಂಸದರು, ಕೇಂದ್ರ ಸಚಿವರು ಹಾಗೂ ಆ ಭಾಗದ ಶಾಸಕರು, ರೈತ ಮುಖಂಡರ ಸಭೆಯನ್ನು ನಡೆಸುತ್ತಿದ್ದೇನೆ pic.twitter.com/txXR7TF0Ra
— CM of Karnataka (@CMofKarnataka) August 14, 2017
ಇಂದು ಬೆಳಗ್ಗೆ ಕಾವೇರಿ ನಿವಾಸದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದೆ pic.twitter.com/IQ4BhQGxTA
— CM of Karnataka (@CMofKarnataka) August 14, 2017

Leave a Reply